ಇತ್ತೀಚೆಗಷ್ಟೇ ತೆರೆಕಂಡ ಟ್ರೇಲರ್ ಬೆನ್ನಲ್ಲೇ ಕೇರಳ ರಾಜಕೀಯ ವಲಯದಲ್ಲಿ ಭಾರೀ ವಿವಾದ ಸೃಷ್ಟಿಯಾಗಿದೆ. ಎರಡೂ ಪಕ್ಷಗಳ ನಡುವೆ ಮಾತಿನ ಚಕಮಕಿಗಳು ನಡೆಯುತ್ತಿವೆ. ಈ ಮಧ್ಯೆ, ಸ್ವತಃ ನಿರ್ದೇಶಕರೇ ತಮ್ಮ ಸಿನಿಮಾ ಬಗ್ಗೆ ಮಾತನಾಡಿ, "ಇದು ಸತ್ಯಾಂಶ ಆಧಾರಿತ ಸಿನಿಮಾ. ದೇಶಾದ್ಯಂತ ಇಂತಹ ಘಟನೆಗಳು ನಡೆಯುತ್ತಿವೆ. ಹುಡುಗಿಯರನ್ನು ಬಲೆಗೆ ಬೀಳಿಸಲು, ದೇಶದ ಜನಸಂಖ್ಯೆಯನ್ನು ಬದಲಿಸಲು ಪ್ರೀತಿಯನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ" ಎಂದಿದ್ದಾರೆ.