ಮತ್ತೊಂದೆಡೆ, ತಮ್ಮ ಚಿತ್ರಕ್ಕೆ ವ್ಯಕ್ತವಾಗಿರುವ ಆಕ್ರೋಶ, ಟೀಕೆಗಳ ನಡುವೆಯೂ ತಮ್ಮ ನೇರನುಡಿಯನ್ನು ವ್ಯಕ್ತಪಡಿಸಿರುವ ನಿರ್ದೇಶಕರು, "ಇದು ಸತ್ಯಾಂಶ ಆಧಾರಿತ ಸಿನಿಮಾ. ದೇಶಾದ್ಯಂತ ಇಂತಹ ಘಟನೆಗಳು ನಡೆಯುತ್ತಿವೆ. ಹುಡುಗಿಯರನ್ನು ಬಲೆಗೆ ಬೀಳಿಸಲು, ದೇಶದ ಜನಸಂಖ್ಯೆಯನ್ನು ಬದಲಿಸಲು ಪ್ರೀತಿಯನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ಇಂತಹ ಪರಿಸ್ಥಿತಿಯ ಬಗ್ಗೆ ದೇಶಕ್ಕೆ ತಿಳಿಯಬೇಕು. ಪ್ರೀತಿ ಹೆಸರಲ್ಲಿ ಹೆಣ್ಣುಮಕ್ಕಳನ್ನು ಬೆಲೆಗೆ ಕೆಡವಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲೇ, ನಾವು ಈ ಚಿತ್ರವನ್ನು ಮಾಡಿರೋದು. ಈ ಹಿಂದೆ ಮೊದಲ ಭಾಗವನ್ನು ಜನ ಒಪ್ಪಿಕೊಂಡಿದ್ದಾರೆ. ಅಂತೆಯೇ, ಎರಡನೇ ಭಾಗವನ್ನು ಚಿತ್ರಮಂದಿರಗಳಲ್ಲಿ ಹೋಗಿ ನೋಡ್ತಾರೆ ಎಂದು ನಿರೀಕ್ಷಿಸುತ್ತಿದ್ದೇವೆ. ಈ ಚಿತ್ರವು ಸತ್ಯವನ್ನು ಬಿಟ್ಟು ಬೇರೇನೂ ತೋರಿಸುವುದಿಲ್ಲ" ಎಂದಿದ್ದಾರೆ,(ಏಜೆನ್ಸೀಸ್).