ಒಂದು ಹಂತದಲ್ಲಿ ಪಾರ್ವತಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ನಿರ್ದೇಶಕರ ಬಳಿ ತೆರಳಿ, ಹೋಟೆಲ್‌ಗೆ ಹೋಗಿ ಬಟ್ಟೆ ಬದಲಾಯಿಸಿ ಬರುತ್ತೇನೆ ಎಂದು ಕೇಳಿದರು. ಆದರೆ, ನಿರ್ದೇಶಕರು ಪಾರ್ವತಿ ಅವರ ಸಂಕಟವನ್ನು ಅರ್ಥಮಾಡಿಕೊಳ್ಳದೆ, ನಮಗೆ ಹೆಚ್ಚು ಸಮಯವಿಲ್ಲ, ಶೂಟಿಂಗ್ ತಕ್ಷಣ ಮುಗಿಸಬೇಕು ಎಂದು ಕೂಗಾಡಿದರು. ಆದರೆ, ನನ್ನಿಂದ ಇನ್ನಷ್ಟು ಸಹಿಸಲು ಆಗಲಿಲ್ಲ. ಕೊನೆಗೆ ನನ್ನ ಅಸ್ವಸ್ಥತೆ ಕೋಪವಾಗಿ ಬದಲಾಯಿತು, ಬಳಿಕ ಎಲ್ಲರ ಮುಂದೆಯೇ ಜೋರಾಗಿ ಕೂಗಿ, ನಾನು ಮುಟ್ಟಿನಲ್ಲಿದ್ದೇನೆಂದು ಹೇಳಿದೆ. ಆನಂತರ ಎಲ್ಲವು ಸರಿಯಾಯಿತು ಎಂದು ಪಾರ್ವತಿ ಹೇಳಿದರು.