ಕೊಚ್ಚಿ: ತಮಿಳು, ಮಲಯಾಳಂ ಚಿತ್ರರಂಗದ ಯುವ ಜನಪ್ರಿಯ ನಟಿ ಮಮಿತಾ ಬೈಜು (Mamitha Baiju) ಸದ್ಯ ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಮಮಿತಾ ನಟನೆಯ ಇತ್ತೀಚಿನ ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡುತ್ತಿದ್ದರೂ, ಆರೋಗ್ಯ ಸಮಸ್ಯೆಯಿಂದಾಗಿ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ, ವ್ಯಕ್ತಿಯೊಬ್ಬ ನಟಿಯನ್ನು ಮದುವೆ ಆಗುವ ಆಸೆಯನ್ನು ಬಹಿರಂಗವಾಗಿ ಫೇಸ್ಬುಕ್ ಮುಖಾಂತರ ಕೇಳಿರುವುದು ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.