ಬೆಂಗಳೂರು: ಕೇರಳ ಮತ್ತು ತಮಿಳುನಾಡಿನಲ್ಲಿ ಸದ್ಯ ಎಲೆಕ್ಷನ್ ಹವಾ ಜೋರಾಗಿದೆ. ಇದೇ 9ರಂದು ಕೇರಳದಲ್ಲಿ ಮತದಾನ ನಡೆದರೆ, 23ಕ್ಕೆ ತಮಿಳುನಾಡಿನಲ್ಲಿ ವೋಟಿಂಗ್. ಎಲೆಕ್ಷನ್ ಬಿಸಿಯ ಮಧ್ಯೆಯೂ ಮಲಯಾಳಂನ ‘ಪಳ್ಳಿಚಟ್ಟಂಬಿ’ ಚಿತ್ರ ಇದೇ 10ಕ್ಕೆ ತೆರೆಗೆ ಬರಲು ಸಿದ್ಧವಾಗಿತ್ತು. ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಈಗಾಗಲೇ ಹೈದರಾಬಾದ್, ಚೆನ್ನೈ ಸೇರಿ ಮಂಗಳವಾರ ಬೆಂಗಳೂರಿನಲ್ಲೂ ಚಿತ್ರತಂಡ ಪ್ರಚಾರ ನಡೆಸಿತ್ತು. ನಟ ಟೊವಿನೋ ಥಾಮಸ್, ನಟಿ ಕಯಾದು ಲೋಹರ್ ಭಾಗಿಯಾಗಿದ್ದರು. ಪ್ರಚಾರದ ನಡುವೆಯೇ ಇದೀಗ ಚಿತ್ರತಂಡ ದಿಢೀರ್ ರಿಲೀಸ್ ದಿನಾಂಕ ಮುಂದೂಡಿದೆ. ಇದೇ 10ಕ್ಕೆ ಬರಬೇಕಿದ್ದ ‘ಪಳ್ಳಿಚಟ್ಟಂಬಿ’ ಏ.15ಕ್ಕೆ ಪೋಸ್ಟ್‌ಪೋನ್ ಆಗಿದೆ. ಎಲೆಕ್ಷನ್ ಕಾರಣದಿಂದಾಗಿಯೇ ಬಿಡುಗಡೆ ದಿನಾಂಕ ಮುಂದೂಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಬೆಂಗಳೂರಿಗೆ ಆಗಮಿಸಿದ ಖುಷಿಯಲ್ಲಿ ಟೊವಿನೋ, ‘ಮೊದಲಿನಿಂದಲೂ ಕನ್ನಡ ಜನತೆ ನನಗೆ ಬೆಂಬಲವಾಗಿ ನಿಂತಿದ್ದಾರೆ. ನನ್ನ ಬಹುತೇಕ ಸ್ನೇಹಿತರು ಮೈಸೂರು, ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಹಾಗೆಯೇ, ಶಿಕ್ಷಣಕ್ಕೆ ಈ ಎರಡು ಸ್ಥಳಗಳು ಪ್ರಸಿದ್ಧಿ ಪಡೆದಿವೆ. ಬೆಂಗಳೂರಿನ ವಾತಾವರಣ ನನಗಿಷ್ಟ. ಇನ್ನು ‘ಪಳ್ಳಿಚಟ್ಟಂಬಿ’ ಇಲ್ಲಿಯವರೆಗೆ ನಮ್ಮ ಚಿತ್ರವಾಗಿತ್ತು. ಇದೀಗ ಪ್ರೇಕ್ಷಕರ ಸಿನಿಮಾ. ಮೊದಲಿಗೆ ೆಬ್ರವರಿಯಲ್ಲಿ ರಿಲೀಸ್‌ಗೆ ನಿರ್ಧರಿಸಿದ್ದೆವು. ಆದರೆ, ಆಗ ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದ ವಾತಾವರಣ ಇತ್ತು. ಹಾಗಾಗಿ, ಏಪ್ರಿಲ್‌ಗೆ ಬರಲು ನಿರ್ಧರಿಸಿದ್ದೇವೆ’ ಎಂದರು.