ನಿರ್ದೇಶಕ ಪ್ರಿಯದರ್ಶನ್, ನಟ ಮೋಹನ್‌ಲಾಲ್ ಜೋಡಿಯ ಸಿನಿ ಜರ್ನಿ 43 ವರ್ಷಗಳ ಸುದೀರ್ಘವಾದುದು. ಮೋಹನ್‌ಲಾಲ್ ಅಭಿನಯದ ‘ಸಿಂಧೂರ ಸಂಧ್ಯಕ್ಕೂ ಮೌನಂ’, ‘ಭೂಕಂಬಂ’ ಮತ್ತು ‘ವನೀತಾ ಪೊಲೀಸ್’ ಚಿತ್ರಗಳಿಗೆ ಮೊದಲಿಗೆ ಬರಹಗಾರರಾಗಿ ಕೆಲಸ ಮಾಡಿದ್ದ ಪ್ರಿಯದರ್ಶನ್, 1984ರಲ್ಲಿ ತೆರೆಕಂಡ ‘ಪೂಚ್ಚಕ್ಕೊರು ಮೂಕ್ಕುತಿ’ ಮೂಲಕ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದರು. ಅಲ್ಲಿಂದ ಆರಂಭವಾದ ಈ ಜೋಡಿಯ ಸಿನಿಮಾ ಪಯಣ ಬಳಿಕ ‘ಬೋಯಿಂಗ್ ಬೋಯಿಂಗ್’, ‘ಚಿತ್ರಂ’, ‘ಹಲೋ ಮೈ ಡಿಯರ್ ರಾಂಗ್ ನಂಬರ್’, ‘ಮಿಥುನಂ’, ‘ಅಭಿಮನ್ಯು ಮಿನ್ನಾರಂ’, ‘ಚಂದ್ರಲೇಖ’, ‘ಕಾಲಾಪಾನಿ’ ಹೀಗೆ 40ಕ್ಕೂ ಅಧಿಕ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದೆ. ಇನ್ನು 2021ರಲ್ಲಿ ತೆರೆಕಂಡಿದ್ದ ‘ಮರಕ್ಕರ್: ಲಯನ್ ಆ್ ದ ಅರೇಬಿಯಾನ್ ಸೀ’ ತೆರೆಕಂಡು ಐದು ವರ್ಷಗಳ ಬಳಿಕ ಇದೀಗ ಮತ್ತೆ ಈ ಜೋಡಿ ಒಂದಾಗುತ್ತಿದೆ.