ಕೇರಳ: ತಮ್ಮ ಸಿನಿಮಾ ಸುದ್ದಿಗಳಿಗಿಂತ ಮದುವೆ ಮತ್ತು ವಿಚ್ಛೇದನದ ವಿಷಯಗಳಿಂದಲೇ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದ ಮಲಯಾಳಂ ನಟಿ ಮೀರಾ ವಾಸುದೇವ್, ಒಂದಷ್ಟು ಸೂಪರ್ಹಿಟ್ ಚಿತ್ರಗಳನ್ನು ನೀಡಿದ ಚೆಲುವೆ. ಒಂದಲ್ಲ, ಎರಡಲ್ಲ ಒಟ್ಟು ಮೂರು ಮದುವೆಯಾದ ಈ ಸ್ಟಾರ್ ಬ್ಯೂಟಿ, ಮೂವರಿಂದಲೂ ಡಿವೋರ್ಸ್ ಪಡೆದು ಸದ್ಯ ಸಿಂಗಲ್ ಆಗಿದ್ದಾರೆ. ಕಳೆದ ವರ್ಷ ನಡೆದ ಸಂದರ್ಶನವೊಂದರಲ್ಲಿ ಅವರು, ಮೋಹನ್ ಲಾಲ್ ಜೊತೆ ನಟಿಸಿದ ಚಿತ್ರದ ಸೀನ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಆದರೀಗ, ಆ ವಿಷಯ ಸಿನಿಮಾ ನಿರ್ದೇಶಕರಿಂದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.