Meera Vasudevan; ಮುರಿದು ಬಿತ್ತು ಮೂರನೇ ಮದುವೆ

ಮೀರಾ ವಾಸುದೇವನ್​
ಮೀರಾ ವಾಸುದೇವನ್​
Published on
Meera Vasudevan - ಸಿನಿಮಾ ತಾರೆಯರ ಜೀವನ ಕೆಲವೊಮ್ಮೆ ಯಾವ ಚಿತ್ರಕ್ಕೂ ಕಡಿಮೆ ಇಲ್ಲ ಎಂಬಂತೆ ಟ್ವಿಸ್ಟ್​ಗಳಿಂದ ಕೂಡಿರುತ್ತದೆ. ಅದರಲ್ಲೂ ಅವರ ಪ್ರೀತಿ, ಮದುವೆ, ಬ್ರೇಕಪ್​, ವಿಚ್ಛೇದನದ ಕಥೆಗಳಂತೂ ಎಂತಹ ಥ್ರಿಲ್ಲರ್​ಗಳನ್ನೂ ಮೀರಿಸುವಂತಿರುತ್ತವೆ. ಈಗೇಕೆ ಮದುವೆ ಕಹಾನಿ ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಕಾರಣ, ರಾಜ್ಯಪ್ರಶಸ್ತಿ ಮಲಯಾಳಂ ನಟಿ ಮೀರಾ ವಾಸುದೇವನ್​.
ಹೌದು, ಮೀರಾ ಇತ್ತೀಚೆಗಷ್ಟೆ ಮೂರನೇ ಪತಿ ಛಾಯಾಗ್ರಾಹಕ ವಿಪಿನ್​ರಿಂದ ದೂರವಾಗಿದ್ದಾರೆ. ಈ ಬಗ್ಗೆ ಖುದ್ದು ಅವರೇ ಜಾಲತಾಣದಲ್ಲಿ, "ನಾನು ನಟಿ ಮೀರಾ ವಾಸುದೇವನ್​ ಇದೇ ಆಗಸ್ಟ್​ 2025ರಿಂದ ನಾನು ಮತ್ತೆ ಒಂಟಿಯಾಗಿದ್ದೇನೆ ಎಂದು ಅಧಿಕೃತವಾಗಿ ತಿಳಿಸುತ್ತಿದ್ದೇನೆ. ಸದ್ಯ ನಾನು ನನ್ನ ಬದುಕಿನ ಅದ್ಭುತ ಮತ್ತು ಶಾಂತಿಯುತ ಘಟ್ಟದಲ್ಲಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಆದರೆ, ಈ ಬಗ್ಗೆ ಅವರ ಪತಿ ವಿಪಿನ್​ ಮೌನವಹಿಸಿದ್ದಾರೆ.
40ಕ್ಕೂ ಅಧಿಕ ಸಿನಿಮಾಗಳು, 25ಕ್ಕೂ ಹೆಚ್ಚು ರಿಯಾಲಿಟಿ ಶೋ, ಧಾರಾವಾಹಿ, ಸರಣಿಗಳಲ್ಲಿ ನಟಿಸಿರುವ 43 ವರ್ಷದ ಮೀರಾಗೆ ಈಗ ಮುರಿದುಬಿದ್ದಿರುವುದು ಮೂರನೇ ಮದುವೆ. 2005ರಲ್ಲಿ ಛಾಯಾಗ್ರಾಹಕ ವಿಶಾಲ್​ ಅಗರ್ವಾಲ್​ ಜತೆ ಸಪ್ತಪದಿ ಇಟ್ಟಿದ್ದ ಮೀರಾ, 2010ರಲ್ಲಿ ಅವರಿಂದ ವಿಚ್ಛೇದನ ಪಡೆದಿದ್ದರು.
ಬಳಿಕ 2012ರಲ್ಲಿ "ಕೆಜಿಎಫ್​' ಸೇರಿ ಹಲವು ಸಿನಿಮಾಗಳಲ್ಲಿ ವಿಲನ್​ ಪಾತ್ರಗಳಲ್ಲಿ ನಟಿಸಿರುವ ಜಾನ್​ ಕೊಕ್ಕೇನ್​ ಜತೆ ಮೀರಾ ಮದುವೆಯಾದರು. ಆದರೆ, ಅವರಿಂದಲೂ 2016ರಲ್ಲಿ ದೂರವಾದರು. ನಂತರ ಕಳೆದ ವರ್ಷವಷ್ಟೇ ವಿಪಿನ್​ರನ್ನು ವರಿಸಿದ್ದ ಮೀರಾ ಇದೀಗ ಕೇವಲ ಒಂದೇ ವರ್ಷದಲ್ಲಿ ಅವರಿಂದಲೂ ವಿಚ್ಛೇದನ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net