ಮಲಯಾಳಂ ಹೊಸ ಚಿತ್ರದ ಶೂಟಿಂಗ್ಗಾಗಿ ತಿರುವನಂತಪುರಂಗೆ ಆಗಮಿಸಿದ್ದ ಮೊನಾಲಿಸಾ, ತನಗೆ ಬಲವಂತದ ಮದುವೆ ಮಾಡಿಸಲು ತಂದೆ ಮುಂದಾಗಿದ್ದಾರೆ ಎಂದು ಥಂಪನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ತನ್ನ ಪ್ರಿಯಕರನ ಜೊತೆಗೆ ಠಾಣೆಗೆ ತೆರಳಿದ್ದ ಯುವತಿ, ನಾನು ಫರ್ಮಾನ್ ಖಾನ್ನನ್ನು ಪ್ರೀತಿಸುತ್ತಿದ್ದೇನೆ. ಆದರೆ, ತಂದೆ ಇದಕ್ಕೆ ಒಪ್ಪುತ್ತಿಲ್ಲ. ನಮ್ಮಿಬ್ಬರಿಗೆ ಮದುವೆ ಮಾಡಿಸಿ ಎಂದು ಹೇಳಿದಳು. ಪೊಲೀಸರ ಸಮ್ಮುಖದಲ್ಲೇ, ಫರ್ಮಾನ್ ಖಾನ್ ಮತ್ತು ಮೊನಾಲಿಸಾಗೆ ಶ್ರೀ ನಯ್ನಾರ್ ದೇವ ದೇಗುಲದಲ್ಲಿ ಸರಳವಾಗಿ ವಿವಾಹ ಮಾಡಿಸಲಾಯಿತು. ಇದಕ್ಕೆ ಕೇರಳದ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಮತ್ತು ರಾಜ್ಯಸಭಾ ಸಂಸದ ಎ.ಎ. ರಹೀಮ್ ಭಾಗವಹಿಸಿ, ನವಜೋಡಿಗೆ ಶುಭ ಹಾರೈಸಿದರು.