Pranav-Kalyani Marriage Rumours: ಮೋಹನ್ ಲಾಲ್ ಪುತ್ರನಾದ ಪ್ರಣವ್ ಮೋಹನ್ ಲಾಲ್ರಿಗೆ ಹೃದಯಂ ಸಿನಿಮಾ ಭಾರಿ ಹೆಸರನ್ನು ತಂದುಕೊಟ್ಟಿತ್ತು. ಇದರಲ್ಲಿ ಪ್ರಣವ್ ಮತ್ತು ಕಲ್ಯಾಣಿ ಪ್ರಿಯದರ್ಶನ್ ಜೋಡಿಯ ಕತೆ ಮತ್ತು ಪಾತ್ರ ಪ್ರೇಮಿಗಳಿಗೆ, ಸಿನಿಮಾ ವೀಕ್ಷಕರಿಗೆ ನಿದ್ದೆ ಕೆಡಿಸಿತ್ತು. ಸದ್ಯ ಮಾಲಿವುಡ್ ಕ್ಷೇತ್ರದಲ್ಲಿ ಹೆಚ್ಚಿರುವ ಗುಸುಗುಸು ಎಂದರೆ, ಇವರಿಬ್ಬರ ಮದುವೆ ವಿಚಾರ. ಆದರೆ, ಈ ಊಹಾಪೋಹಕ್ಕೆ ಕಲ್ಯಾಣಿಯವರ ತಾಯಿ ತೆರೆ ಎಳೆದಿದ್ದಾರೆ.