ದೂರಿನ ನಂತರ, ತಮಿಳುನಾಡು ಸೈಬರ್ ಕ್ರೈಮ್ ವಿಂಗ್ ಆರು ಜನರನ್ನು ಬಂಧಿಸಿದ್ದು, ಸುಮಾರು 300 ಕ್ಕೂ ಹೆಚ್ಚು ಅಕ್ರಮ ಲಿಂಕ್‌ಗಳನ್ನು ತೆಗೆದುಹಾಕಿದೆ. ಎಚ್. ವಿನೋದ್ ನಿರ್ದೇಶನದ 'ಜನನಾಯಕನ್' ವಿಜಯ್ ಅವರ ನಟನಾ ವೃತ್ತಿಜೀವನದ ಕೊನೆಯ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಬಾಬಿ ಡಿಯೋಲ್, ಪೂಜಾ ಹೆಗ್ಡೆ, ಮಮಿತಾ ಬೈಜು, ಗೌತಮ್ ಮೆನನ್ ಮತ್ತು ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಾರಾಬಳಗವಿದೆ (ಏಜೆನ್ಸೀಸ್).