ನೀವು ಒಟಿಟಿಯಲ್ಲಿ ನೋಡಲೇಬೇಕಾದ 9 ಮಲಯಾಳಂ ಹಾರರ್​ ಸಿನಿಮಾಗಳಿವು! ಇಲ್ಲಿದೆ ನೋಡಿ ಪಟ್ಟಿ | Horror Films

ಮಲಯಾಳಂನ ಹಾರರ್​ ಸಿನಿಮಾಗಳು
ಮಲಯಾಳಂನ ಹಾರರ್​ ಸಿನಿಮಾಗಳು
Published on

ಪ್ರಮುಖ ಮುಖ್ಯಾಂಶಗಳು

  • ಹಾರರ್​ ಚಿತ್ರಗಳಲ್ಲಿಯೂ ಸಿನಿರಸಿಕರನ್ನು ಸೆಳೆಯುವ ಮಾಲಿವುಡ್​
  • ನೀವು ಈ 9 ಹಾರರ್​ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡಲು ಮಿಸ್​ ಮಾಡಲೇಬೇಡಿ
ಕೇರಳ: ಅತೀ ಕಡಿಮೆ ಬಜೆಟ್‌ನಲ್ಲಿ ತಯಾರಾದ ಮತ್ತು ಕೇವಲ ವಿಷಯದ ಮೇಲೆ ಹೆಚ್ಚು ಅಧರಿಸಿ, ಅವಲಂಬಿಸಿ ನಿರ್ಮಿಸಲಾದ ಮಲಯಾಳಂ ಸಿನಿಮಾಗಳು ಸದ್ಯ ಭಾರತೀಯ ಬಾಕ್ಸ್ ಆಫೀಸ್​ ಮಾತ್ರವಲ್ಲದೇ, ಚಿತ್ರರಸಿಕರಿಂದ ಸಿಕ್ಕಾಪಟ್ಟೆ ಮೆಚ್ಚುಗೆಗಳನ್ನು ಪಡೆಯುತ್ತಿರುವುದು ಗಮನಾರ್ಹ. ಇದಕ್ಕೆ ಇತ್ತೀಚೆಗೆ ಮತ್ತು ಈ ಹಿಂದೆ ತೆರೆಕಂಡ ಹಲವಾರು ಸಿಂಪಲ್​ ಸ್ಟೋರಿಯ ಸೂಪರ್​ಹಿಟ್​ ಚಿತ್ರಗಳು ಉತ್ತಮ ನಿದರ್ಶನ.
ಹಾಕಿರುವ ಬಂಡವಾಳ ಮತ್ತು ಲಾಭದ ಜೊತೆ ಜೊತೆಗೆ ಸಾಕಷ್ಟು ದಾಖಲೆಗಳನ್ನು ತನ್ನದಾಗಿಸಿಕೊಳ್ಳುತ್ತಿರುವ ಮಾಲಿವುಡ್​ ಚಿತ್ರರಂಗದ ಸಿನಿಮಾಗಳು ಕೇವಲ ಯಾವುದೋ ಒಂದು ಜಾನರ್​ಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ಇಲ್ಲಿ ಗಮನಾರ್ಹ. ಆ್ಯಕ್ಷನ್, ಲವ್​, ದಾಂಪತ್ಯ, ಕ್ರೈಂ-ಥ್ರಿಲ್ಲರ್​, ಆಳವಾದ ಮತ್ತು ಮಹತ್ವದ ಸಂದೇಶಗಳನ್ನು ಒಳಗೊಂಡ ಚಿತ್ರಗಳನ್ನೇ ತೆರೆಗೆ ತಂದು, ಅದರಲ್ಲಿ ಗೆಲುವು ನೋಡುವುದು ಮಲಯಾಳಂನವರ ಕಿಲಾಡಿತನ. ಇದು ಹಾರರ್​ ಕಥೆಗಳಿಗೂ ಅನ್ವಯಿಸುತ್ತದೆ.
ಹಾರರ್​-ಥ್ರಿಲ್ಲರ್​, ಸಸ್ಪೆನ್ಸ್​ ಸ್ಟೋರಿಗಳಲ್ಲಿಯೂ ಸಕ್ಸಸ್​ ಕಂಡಿರುವ ಮಾಲಿವುಡ್​, ಇಂತಹ ಕಥೆಗಳನ್ನು ಇಷ್ಟಪಡುವ ವರ್ಗಕ್ಕೂ ತಮ್ಮ ಸಿನಿಮಾಗಳಲ್ಲಿ ಸೆಳೆಯುವಂತ ವಿಷಯಗಳನ್ನು ಇಟ್ಟಿರುತ್ತಾರೆ. ಈ ಮೂಲಕ ಹಾರರ್​ ಜಾನರ್​ ಲೈಕ್​ ಮಾಡುವ ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಾರೆ. ಮಲಯಾಳಂನ ಹಲವು ಸೂಪರ್​ಹಿಟ್​ ಹಾಗೂ ಗಮನ ಸೆಳೆದ ಭಯಾನಕ ಸಿನಿಮಾಗಳ ಪೈಕಿ ಒಂದಷ್ಟು ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ನೀವು ಒಟಿಟಿಯಲ್ಲಿ ನೋಡಲೇಬೇಕಾದ ಹಾರರ್​ ಚಿತ್ರಗಳಿವು

1. ಹಲೋ ಮಮ್ಮಿ
ಒಟಿಟಿ: ಪ್ರೈಮ್ ವಿಡಿಯೋ
2. ವೆಲ್ಲಿನಕ್ಷತ್ರಂ
ಒಟಿಟಿ: ಪ್ರೈಮ್ ವಿಡಿಯೋ
3. ದೇವದೂತನ್
ಒಟಿಟಿ: ಯೂಟ್ಯೂಬ್
4. ಇನ್ ಘೋಸ್ಟ್ ಹೌಸ್ ಇನ್
ಒಟಿಟಿ: ಜಿಯೋ ಹಾಟ್‌ಸ್ಟಾರ್
5. ಮೂನ್ನಮಥೋರಲ್
ಒಟಿಟಿ: ಇರೋಸ್ ನೌ, ಯೂಟ್ಯೂಬ್
6. ಡೈಸ್ ಇರೆ
ಒಟಿಟಿ: ಜಿಯೋ ಹಾಟ್‌ಸ್ಟಾರ್
7. ಪ್ರೇತಮ್
ಒಟಿಟಿ: ಸನ್ ನೆಕ್ಸ್ಟ್​
8. ನೀಲವೇಲಿಚಂ
ಒಟಿಟಿ: ಪ್ರೈಮ್ ವಿಡಿಯೋ
9. ಫೀನಿಕ್ಸ್
ಒಟಿಟಿ: ಪ್ರೈಮ್ ವಿಡಿಯೋ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net