ಹಾಟ್​ ಅವತಾರದಲ್ಲಿ ಸಂಗೀತ ಕಾರ್ಯಕ್ರಮ: ಖ್ಯಾತ ಡಿಜೆ ಸನಾ ಮೇಲೆ ಮುಗಿಬಿದ್ದ ಕಿರಾತಕರು! DJ Sanaah

ಹಾಟ್​ ಅವತಾರದಲ್ಲಿ ಸಂಗೀತ ಕಾರ್ಯಕ್ರಮ: ಖ್ಯಾತ ಡಿಜೆ ಸನಾ ಮೇಲೆ ಮುಗಿಬಿದ್ದ ಕಿರಾತಕರು! DJ Sanaah
ಹಾಟ್​ ಅವತಾರದಲ್ಲಿ ಸಂಗೀತ ಕಾರ್ಯಕ್ರಮ: ಖ್ಯಾತ ಡಿಜೆ ಸನಾ ಮೇಲೆ ಮುಗಿಬಿದ್ದ ಕಿರಾತಕರು! DJ Sanaah
Published on

ಪ್ರಮುಖ ಮುಖ್ಯಾಂಶಗಳು

  • ಕೇರಳದ ತ್ರಿಸ್ಸೂರ್​ನಲ್ಲಿರುವ ಹೈಲೈಟ್ ಮಾಲ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮ
  • ಖ್ಯಾತ ಮಲಯಾಳಿ ಡಿಜೆ ಸನಾ ಅವರ ಮೇಲೆ ತೀವ್ರ ಸೈಬರ್ ದಾಳಿ
  • ಕಾಮೆಂಟ್​ಗಳ ಮೂಲಕ ಸನಾಗೆ ಲೈಂಗಿಕ ಕಿರುಕುಳ ಹಾಗೂ ಬಾಡಿ ಶೇಮಿಂಗ್​
DJ Sanaah : ಕೇರಳದ ತ್ರಿಸ್ಸೂರ್​ನಲ್ಲಿರುವ ಹೈಲೈಟ್ ಮಾಲ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದ ನಂತರ, ಖ್ಯಾತ ಮಲಯಾಳಿ ಡಿಜೆ ಸನಾ ಅವರ ಮೇಲೆ ತೀವ್ರ ಸೈಬರ್ ದಾಳಿಗಳು ನಡೆಯುತ್ತಿವೆ.
ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಡಿಜೆ ಸನಾ ಧರಿಸಿದ್ದ ಉಡುಗೆ ತೊಡುಗೆಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಅವರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಕೆಟ್ಟ ಕಾಮೆಂಟ್​ಗಳ ಮೂಲಕ ಸನಾಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಬಾಡಿ ಶೇಮಿಂಗ್ ಮಾಡುವ ಮೂಲಕ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ.
ಸಂಗೀತ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆದ ಬಳಿಕ ಈ ಬೆಳವಣಿಗೆ ನಡೆದಿದೆ. ಒಂದು ವರ್ಗದ ಜನ, ಸನಾಳ ಉಡುಗೆ ಮತ್ತು ದೇಹವನ್ನು ಅವಮಾನಿಸಿದರೆ, ಇನ್ನೊಂದು ವರ್ಗ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ತನ್ನಿಷ್ಟದ ಉಡುಗೆ ತೊಡುವುದು ಆಕೆಯ ವೈಯಕ್ತಿಕ ಸ್ವಾತಂತ್ರ್ಯ. ಸನಾ ತನ್ನ ಪಾಡಿಗೆ ತನ್ನ ಕೆಲಸವನ್ನು ಮಾಡುತ್ತಿದ್ದಾಳೆ. ಎಲ್ಲದರಲ್ಲೂ ಅಶ್ಲೀಲತೆಯನ್ನು ಕಾಣುವುದು ಸರಿಯಲ್ಲ ಎಂದು ಕೆಲವರು ಸನಾ ಪರ ಬ್ಯಾಟ್ ಬೀಸಿದ್ದಾರೆ. ಹೀಗೆ, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿದೆ.
ಇನ್ನು ಸನಾ ಅವರು ತಮ್ಮ ವಿರುದ್ಧದ ಸೈಬರ್​ ದಾಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸನಾ ತ್ರಿಶೂರ್‌ನಲ್ಲಿ ನಡೆದ ಕಾರ್ಯಕ್ರಮದ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡ ಬಳಿಕ ಇಷ್ಟೆಲ್ಲ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಯಾರು ಈ ಡಿಜೆ ಸನಾ?

ಕೇರಳದ ತ್ರಿಶೂರ್ ಮೂಲದ ಡಿಜೆ ಸನಾ ಅಂತಾರಾಷ್ಟ್ರೀಯವಾಗಿ ಪ್ರಸಿದ್ಧ ಡಿಜೆ ಪ್ರದರ್ಶಕಿ. ವೃತ್ತಿಜೀವನದ ಆರಂಭದಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಇವರು, ನಂತರ ಸಂಗೀತದ ಮೇಲಿನ ಆಸಕ್ತಿಯಿಂದಾಗಿ ಡಿಸ್ಕ್ ಜಾಕಿಯಾಗಿ (DJ) ಬದಲಾದರು. ಮುಖ್ಯವಾಗಿ ಮಲಯಾಳಂ ಮಾತ್ರವಲ್ಲದೆ ದಕ್ಷಿಣ ಭಾರತದ ವಿವಿಧ ಭಾಷೆಗಳ ಹಿಟ್ ಹಾಡುಗಳಿಗೆ ಎಲೆಕ್ಟ್ರಾನಿಕ್ ಮತ್ತು ಡ್ಯಾನ್ಸ್ ಮ್ಯೂಸಿಕ್ ಸ್ಪರ್ಶ ನೀಡಿ ಪ್ರದರ್ಶನ ನೀಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿದ್ದಾರೆ. ಕೇರಳದ ಪ್ರಮುಖ ಕ್ಲಬ್‌ಗಳು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಕಾಲೇಜು ಫೆಸ್ಟ್‌ಗಳಲ್ಲಿ ತಮ್ಮ ವಿಶಿಷ್ಟ ಸಂಗೀತ ಶೈಲಿಯಿಂದ ಯುವ ಪೀಳಿಗೆಯ ಗಮನ ಸೆಳೆದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net