ಹಿರಿಯ ನಟ ಮಿಥುನ್​ ಚಕ್ರವರ್ತಿ ತಂದೆ ನಿಧನ; ಆದ್ರೆ ಅಂತ್ಯಕ್ರಿಯೆಯಲ್ಲಿ ಮಿಥುನ್​ ಹೇಗೆ ಪಾಲ್ಗೊಳ್ಳುತ್ತಾರೆ?...ಮಕ್ಕಳು ಏನೂ ಹೇಳ್ತಿಲ್ಲ...

Mithu Chakravarti 22 april 20
Published on

ನವದೆಹಲಿ: ಬಾಲಿವುಡ್​ನ ಪ್ರಸಿದ್ಧ ಹಿರಿಯ ನಟ, ರಾಜ್ಯಸಭಾ ಮಾಜಿ ಸಂಸದ ಮಿಥುನ್​ ಚಕ್ರವರ್ತಿಯವರ ತಂದೆ ಬಸಂತ್​ಕುಮಾರ್​ ಚಕ್ರವರ್ತಿಯವರು ಇಂದು ನಿಧನರಾಗಿದ್ದಾರೆ.

ಬಸಂತ್​ಕುಮಾರ್ ಅವರಿಗೆ 95ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಕಿಡ್ನಿ ವೈಫಲ್ಯದಿಂದ ಇಂದು ಮುಂಬೈನಲ್ಲಿ ಮೃತಪಟ್ಟಿದ್ದಾರೆ.

ಆದರೆ ಮಿಥುನ್​ ಚಕ್ರವರ್ತಿಯವರು ಸದ್ಯ ಬೆಂಗಳೂರಿನಲ್ಲಿ ಇದ್ದಾರೆ. ಸಿನಿಮಾ ಶೂಟಿಂಗ್​ವೊಂದಕ್ಕೆ ಮಿಥುನ್​ ಬೆಂಗಳೂರಿಗೆ ಬಂದಿದ್ದರು. ಅದೇ ವೇಳೆಗೆ ಲಾಕ್​ಡೌನ್​ ಆಗಿದ್ದರಿಂದ ವಾಪಸ್​ ಮುಂಬೈಗೆ ಹೋಗದೆ ಇಲ್ಲೇ ಉಳಿದುಕೊಂಡಿದ್ದರು. ಆದರೆ ಈಗ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾಗಿದ್ದು, ಆದಷ್ಟು ಬೇಗ ಅಲ್ಲಿಗೆ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ.

ಮಿಥುನ್​ ಚಕ್ರವರ್ತಿಯ ಮಕ್ಕಳಿಬ್ಬರೂ ಮುಂಬೈನಲ್ಲಿದ್ದಾರೆ. ಸದ್ಯ ಅವರಿಬ್ಬರೂ ಅಂತ್ಯಕ್ರಿಯೆಗೆ ಎಲ್ಲ ರೀತಿಯ ಸಿದ್ಧತೆ ಮಾಡುತ್ತಿದ್ದು, ತಮ್ಮ ತಂದೆಗಾಗಿ ಕಾಯುತ್ತಿದ್ದಾರೆ. ಆದರೆ ಮಿಥುನ್​ ಚಕ್ರವರ್ತಿ ಮುಂಬೈಗೆ ಆಗಮಿಸುವ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ನೀಡುತ್ತಿಲ್ಲ.

ಮಿಥುನ್​ ಚಕ್ರವರ್ತಿ ತಂದೆಯ ನಿಧನಕ್ಕೆ ಹಲವು ನಟ, ನಟಿಯರು ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net