ಮಿಲನ ಪ್ರಕಾಶ್ ಜತೆ ದರ್ಶನ್ ರಾಜಕೀಯ

DARSHAN
Published on

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮಿಲನ ಪ್ರಕಾಶ್ ಕಾಂಬಿನೇಶನ್​ನಲ್ಲಿ ಸಿನಿಮಾವೊಂದು ಮೂಡಿ ಬರಲಿದೆ ಎಂದು ಈ ಹಿಂದೆ ಸುದ್ದಿಯಾಗಿತ್ತು.

ಈಗ ಈ ಸಿನಿಮಾದ ಕಥೆ ಮತ್ತು ಅದರ ಬ್ಯಾಕ್​ಡ್ರಾಪ್ ಬಗ್ಗೆ ರಿವೀಲ್ ಆಗಿದೆ. ‘ತಾರಕ್’ ನಂತರ ಪ್ರಕಾಶ್ ಮತ್ತು ದರ್ಶನ್ ಕಾಂಬಿನೇಶನ್​ನಲ್ಲಿ ಮೂಡಿ ಬರುವ ಈ ಚಿತ್ರ ಕಂಪ್ಲೀಟ್ ರಾಜಕೀಯ ಹಿನ್ನೆಲೆಯುಳ್ಳ ಚಿತ್ರವಂತೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಪ್ರಕಾಶ್ ‘ಈ ಚಿತ್ರ ರಾಜಕೀಯ ಹಿನ್ನೆಲೆಯುಳ್ಳ ಕಥೆಯಾಗಿದೆ.

ನಾನು ಈ ಹಿಂದೆ ಇಂತಹ ಸಬ್ಜೆಕ್ಟ್​ನ್ನು ಹ್ಯಾಂಡಲ್ ಮಾಡಿಲ್ಲ. ಎರಡು ರಾಜಕೀಯ ಕುಟುಂಬಗಳು ಅಧಿಕಾರ ಪಡೆಯಲು ನಡೆಸುವ ನಾನಾ ಕಸರತ್ತುಗಳೇ ಚಿತ್ರಕಥೆಯಾಗಿರುತ್ತದೆ. ಇದರ ಜತೆಗೆ ಆ 2 ಕುಟುಂಬಗಳ ಮುಂದಿನ ಜನರೇಶನ್ ಈ ರಾಜಕೀಯ ಜಿದ್ದಾಜಿದ್ದಿಯನ್ನು ಹೇಗೆ ನಿರ್ವಹಿಸುತ್ತದೆ ಎನ್ನುವುದು ಇದರಲ್ಲಿದೆ. ರಾಜಕೀಯ ಹಿನ್ನೆಲೆಯ ಜತೆಗೆ ಟಿಪಿಕಲ್ ದರ್ಶನ್ ಸಿನಿಮಾ ಸ್ಟೈಲ್ ಇದರಲ್ಲಿರುತ್ತದೆ’ಎಂದಿದ್ದಾರೆ.

ದರ್ಶನ್ ‘ರಾಜವೀರ ಮದಕರಿ ನಾಯಕ’ ಸಿನಿಮಾದ ಜತೆ ಜತೆಗೆ ಈ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ. ಎಲ್ಲವೂ ಸರಿಯಾದರೆ ಈ ಬೇಸಿಗೆಯಲ್ಲಿ ಶೂಟಿಂಗ್ ಆರಂಭವಾಗಲಿದೆ. ದರ್ಶನ್ ಹುಟ್ಟು ಹಬ್ಬಕ್ಕೆ ಸಿನಿಮಾದ ಅಧಿಕೃತ ಅನೌನ್ಸ್​ಮೆಂಟ್ ಆಗಬಹುದು ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net