ಟ್ವಿಟರ್, ಇನ್‌ಸ್ಟಾಗ್ರಾಂ ಖಾತೆ ತೆರೆದ ಮೆಗಾಸ್ಟಾರ್ ಚಿರಂಜೀವಿ; ಆದರೆ ಮೊದಲನೇ ದಿನವೇ ಕಾದಿತ್ತು ಅವರಿಗೆ ಅಚ್ಚರಿ..!

Chiramjivi 26 March 20
Published on

ಇದುವರೆಗೂ ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದ ಮೆಗಾ ಸ್ಟಾರ್ ಚಿರಂಜೀವಿ, ಬುಧವಾರ ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ಒಂದೇ ದಿನಕ್ಕೆ ಲಕ್ಷಲಕ್ಷ ಜನ ಅವರನ್ನು ಹಿಂಬಾಲಿಸಿದ್ದಾರೆ.

ಭಾರತೀಯ ಚಿತ್ರರಂಗದ ಅನೇಕ ಸ್ಟಾರ್ ನಟರು ಸೋಷಿಯಲ್ ಮೀಡಿಯಾದ ಮೂಲಕ ತಮ್ಮ ಅಭಿಮಾನಿಗಳ ಸಂಪರ್ಕದಲ್ಲಿದ್ದಾರೆ. ಆದರೆ, ಚಿರಂಜೀವಿ ಮಾತ್ರ ಇಷ್ಟು ವರ್ಷಗಳ ಕಾಲ ಟ್ವಿಟರ್, ಇನ್‌ಸ್ಟಾಗ್ರಾಮ್‌ನಿಂದ ದೂರವೇ ಇದ್ದರು. ಈಗ ಇದ್ದಕ್ಕಿದ್ದಂತೆ ಅವರು ಸೋಷಿಯಲ್ ಮೀಡಿಯಾದತ್ತ ಬರುವುದಕ್ಕೆ ಕಾರಣವೇನು ಎಂದು ಅವರೇ ಹೇಳಿಕೊಂಡಿದ್ದಾರೆ.

‘ನಾನು ಹಲವು ವಿಷಯಗಳನ್ನು ಜನರೊಂದಿಗೆ ಹಂಚಿಕೊಳ್ಳುವುದಕ್ಕೆ ಬಯಸುತ್ತೇನೆ. ನನ್ನ ಜೀವನದ ಮುಖ್ಯ ಘಟ್ಟಗಳು, ಇವತ್ತಿನ ಪ್ರಸಕ್ತ ಸನ್ನಿವೇಶಗಳು ... ಇವೆಲ್ಲವನ್ನೂ ಜನರ ಜತೆಗೆ ಹಂಚಿಕೊಳ್ಳುವ ಆಸೆ ನನ್ನದು. ಅದಕ್ಕೆ ಸೋಷಿಯಲ್ ಮೀಡಿಯಾಗಿಂಥ ಉತ್ತಮ ವೇದಿಕೆ ಸಿಗುವುದಿಲ್ಲ. ಹಾಗಾಗಿ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದೇನೆ’ ಎಂದು ಮೆಗಾ ಸ್ಟಾರ್ ತಿಳಿಸಿದ್ದಾರೆ.

ಬುಧವಾರದಿಂದ ಸರಣಿ ಟ್ವೀಟ್‌ಗಳನ್ನು ಮಾಡಿರುವ ಚಿರಂಜೀವಿ, ಚಿತ್ರೋದ್ಯಮ ಬಂದ್ ಆಗಿರುವುದರಿಂದ ತೊಂದರೆಗೆ ಸಿಲುಕಿರುವ ಕಾರ್ಮಿಕರ ನೆರವಿಗೆ ಒಂದು ಕೋಟಿ ರೂಪಾಯಿ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net