

ಕಾಲಿವುಡ್ನಲ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಮಾತುಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವವರು ಎಂದರೆ ಅದು ಮೀರಾ ಮಿಥುನ್. 'ಬಿಗ್ ಬಾಸ್'ನ ಮೂರನೆಯ ಸೀಸನ್ನಲ್ಲಿ ಸ್ಪರ್ಧಿಯಾಗಿದ್ದ ಈಕೆ, ಈ ಹಿಂದೆ ಕಮಲ್ ಹಾಸನ್, ತ್ರಿಷಾ ಮುಂತಾದವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಈಗ ಅದೇ ಮೀರಾ, ಸೀದಾ ರಜನಿಕಾಂತ್ ಮತ್ತು ವಿಜಯ್ ವಿರುದ್ಧ ಲೀಗಲ್ ಆಕ್ಷನ್ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ‘ಆ ಕರಾಳ ರಾತ್ರಿ’ ನೋಡಿದ್ದಾಯ್ತು … ಇದೀಗ ಓದಬಹುದು …
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಅವರು, ರಜನಿಕಾಂತ್ ಮತ್ತು ವಿಜಯ್ ತಮ್ಮ ಹೆಸರಿಗೆ ಮಸಿ ಬಳಿಯುವುದಕ್ಕೆ ಪ್ರಯತ್ನಿಸುತ್ತಿದ್ದು, ಅವರ ವಿರುದ್ಧ ನ್ಯಾಯಯುತವಾದ ಹೋರಾಟ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ತಮಿಳು ನಾಡು ನನ್ನನ್ನು ಬಾಯ್ಕಾಟ್ ಮಾಡಿತು. ಹಾಗಂತ ನನಗೆ ಬೇಸರವಿಲ್ಲ. ಏಕೆಂದರೆ, ನಾನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಪರ್ ಮಾಡಲ್ ಆಗಿದ್ದೇನೆ. ಕಾಲಿವುಡ್ನ ವಿರುದ್ಧ ತಿರುಗಿ ಬಿದ್ದಿತು. ಅದೇ ಕಾರಣಕ್ಕೆ ನಾನು ಬಾಲಿವುಡ್ ಮತ್ತು ಹಾಲಿವುಡ್ನಲ್ಲಿ ಮಿಂಚುತ್ತಿದ್ದೇನೆ. ಇವರೆಲ್ಲಾ ಯಾಕೆ ನನ್ನ ಹಿಂದೆ ಬಿದ್ದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನನ್ನನ್ನು ಹರಾಸ್ ಮಾಡುವುದು, ನನ್ನ ಬಗ್ಗೆ ಮಾತಾಡುವುದು ಇಷ್ಟೇನಾ ಇವರಿಗೆ ಗೊತ್ತಿರುವುದು' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇನ್ನು ಜಾತಿ, ಧರ್ಮದ ವಿಷಯಗಳನ್ನೆಲ್ಲಾ ಎಳೆದು ತಂದಿರುವ ಮೀರಾ, 'ತಮಿಳುನಾಡು ತಮಿಳರಿಗೆ, ಹಿಂದುಗಳಿಗೆ ಸೇರಿದ್ದು. ಆದರೆ, ಇಂದು ಮಲಯಾಳಿಗಳು, ಬೇರೆ ಧರ್ಮದವರು ಬಂದು ಇಲ್ಲಿ ಆಳುತ್ತಿದ್ದಾರೆ. ಒಬ್ಬ ತಮಿಳು ಹೆಣ್ಣಿಗೆ ಅವಮಾನ ಮಾಡುತ್ತಿದ್ದಾರೆ. ರಜನಿಕಾಂತ್ ಮತ್ತು ವಿಜಯ್ ಇಬ್ಬರೂ ನನ್ನ ಮಾನಹಾನಿ ಮಾಡುತ್ತಿದ್ದಾರೆ. ಹೀಗೆಯೇ ಮುಂದುವರೆದರೆ, ನಾನು ಅವರ ವಿರುದ್ಧ ಲೀಗಲ್ ಆಕ್ಷನ್ ತೆಗೆದುಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಂಗನಾ ರಣಾವತ್ಗೆ ತಾಯಿಯಾದರು ಹಿರಿಯ ನಟಿ ಭಾಗ್ಯಶ್ರೀ
ಮೀರಾ ಮಾಡಿರುವ ಇಷ್ಟೆಲ್ಲಾ ಆರೋಪಗಳಿಗೆ, ಕಾಲಿವುಡ್ ಜನ ಏನಂತ ಉತ್ತರಿಸುತ್ತಾರೋ ಗೊತ್ತಿಲ್ಲ.