ಮಯೂರಿಗೆ ತಾರೆಯರಿಂದ ಸೀಮಂತ; ಸುವರ್ಣ ಸೂಪರ್ ಸ್ಟಾರ್​ನಲ್ಲಿ ಸಂಕ್ರಾಂತಿ ಸಂಭ್ರಮ

Ullasa Mayuri
Published on

ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯ ‘ಸುವರ್ಣ ಸೂಪರ್ ಸ್ಟಾರ್’ ಕಾರ್ಯಕ್ರಮದಲ್ಲಿ ವಾರವಿಡೀ ‘ಸಂಕ್ರಾಂತಿ ಸಂಭ್ರಮ’ದ ವಿಶೇಷ ಸಂಚಿಕೆಗಳು ಪ್ರಸಾರವಾಗಲಿವೆ. ಕಿರುತೆರೆ ಮತ್ತು ಹಿರಿತೆರೆಯ ಸೂಪರ್ ಸ್ಟಾರ್​ಗಳು ಕಾರ್ಯ ಕ್ರಮದ ಮೆರಗು ಹೆಚ್ಚಿಸಲಿದ್ದಾರೆ. ಈಗಾಗಲೇ ವೈಷ್ಣವಿ, ದಿಶಾ ಮದನ್, ಶ್ವೇತಾ ಪ್ರಸಾದ್, ಸ್ವಪ್ನ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ. ಇನ್ನು ನಟಿಯರಾದ ರೇಖಾ, ಸಂಗೀತಾ, ವನಿತಾ ವಾಸು ಗುರುವಾರ ಮತ್ತು ಶುಕ್ರವಾರದ ಸಂಚಿಕೆಗಳಲ್ಲಿ ಮಿಂಚಲಿದ್ದಾರೆ. ಶನಿವಾರ ರಿಯಾಲಿಟಿ ಶೋ ಹಾಡುಗಾರ್ತಿಯರಾದ ಅಂಕಿತಾ, ಸುಪ್ರಿಯಾ ಜೋಷಿ ಮತ್ತು ಅನ್ವಿತಾ ಭಾಗವಹಿಸಲಿದ್ದಾರೆ. ನೇಹಾ ಗೌಡ, ಇಷಿತಾ ವರ್ಷ ಮತ್ತು ಅಪೂರ್ವ ಬುಧವಾರ ಸಂಚಿಕೆಯ ಅತಿಥಿಗಳು.

ಇನ್ನು, ಗರ್ಭಿಣಿಯಾಗಿರುವ ಕಿರುತೆರೆ ಮತ್ತು ಚಂದನವನದ ನಟಿ ಮಯೂರಿಗೆ ‘ಸುವರ್ಣ ಸೂಪರ್ ಸ್ಟಾರ್’ ವೇದಿಕೆಯಲ್ಲಿ ಸೀಮಂತ ಮಾಡಲಾಯಿತು. ನಟಿಯರಾದ ರೇಖಾ, ವನಿತಾ ವಾಸು ಮತ್ತು ಸಂಗೀತಾ ಜತೆಯಲ್ಲಿ ಕಾರ್ಯಕ್ರಮದ ನಿರೂಪಕಿ ಶಾಲಿನಿ, ಮಯೂರಿಯವರ ಸೀಮಂತ ಕಾರ್ಯಕ್ರಮವನ್ನು ವಿಶೇಷವಾಗಿಸಿದ್ದಾರೆ. ಈ ಸಂಚಿಕೆಗಳು ಜನವರಿ14 ಮತ್ತು 15ರಂದು ಸಂಜೆ 5 ಗಂಟೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net