2 ವರ್ಷಗಳ ಬಳಿಕ ಶಿವರಾತ್ರಿಯಂದು ಮಾಸ್ ಅವತಾರದಲ್ಲಿ ಮಿಂಚಿದ ಪ್ರಿನ್ಸ್ ಮಹೇಶ್! ಪೋಸ್ಟರ್ ವೈರಲ್...

Published on
ಟಾಲಿವುಡ್​ನ ಪ್ರಿನ್ಸ್ ಮಹೇಶ್ ಬಾಬು ಅವರ 'ಸರ್ಕಾರು ವಾರಿ ಪಾಟ' ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೌದು, 2020ರಲ್ಲಿ ಬಿಡುಗಡೆಯಾದ ''ಸರಿಲೇರು ನೀಕೆವ್ವರು'' ಸಿನಿಮಾ ಮೂಲಕ ನಟ ಮಹೇಶ್ ಕೊನೆಯ ಬಾರಿ ತೆರೆಯ ಮೇಲೆ ಮಿಂಚಿದರು. ಇನ್ನು, ಅಂದಿನಿಂದ ಇಂದಿನ ವರೆಗೆ ಪ್ರಿನ್ಸ್ ಮಹೇಶ್ ರನ್ನು ಮತ್ತೆ ತೆರೆಯ ಮೇಲೆ ಕಂಡು ಖುಷಿ ಪಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಹೀಗಾಗಿ, ಮುಂಬರುವ ಚಿತ್ರ 'ಸರ್ಕಾರು ವಾರಿ ಪಾಟ'ದ ಮೇಲೆ ಸಿಕ್ಕಾಪಟ್ಟೆ ಕುತೂಹಲವಿದೆ.
ಅಭಿಮಾನಿಗಳಿಗಿರುವ ಈ ಕುತೂಹಲವನ್ನು 'ಸರ್ಕಾರು ವಾರಿ ಪಾಟ'ದ ಚಿತ್ರತಂಡ ಕೂಡಾ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಈ ಸಿನಿಮಾತಂಡ ಆಗಾಗ ಒಂದಲ್ಲ ಒಂದು ಸರ್ಪ್ರೈಸ್ ನೀಡುತ್ತಿದೆ. ಸದ್ಯ, ನೆನ್ನೆ ಶಿವರಾತ್ರಿ ಹಬ್ಬಕ್ಕೆ ಪ್ರಿನ್ಸ್ ಅಭಿಮಾನಿಗಳಿಗೆ 'ಸರ್ಕಾರು ವಾರಿ ಪಾಟ' ಚಿತ್ರತಂಡದಿಂದ ಹೊಸ ಪೋಸ್ಟರ್ ಒಂದು ಉಡುಗೊರೆಯಾಗಿ ಸಿಕ್ಕಿದೆ. ಇದೀಗ, ಪೋಸ್ಟರ್ ನೋಡಿದ ಅಭಿಮಾನಿಗಳಿಗೆ ಸಿನಿಮಾದ ಮೇಲೆ ಕಾತರ ಮತ್ತಷ್ಟು ಹೆಚ್ಚಾಗಿದ್ದು, ಹೊಸ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಅಭಿಮಾನಿಗಳು ಮಹೇಶ್ ಬಾಬು ಸಿನಿಮಾ ಇಷ್ಟ ಪಡುವುದಕ್ಕೆ ಕಾರಣ ಅಂದರೆ, ಒಂದು ಅವರ ಸಿನಿಮಾದಲ್ಲಿನ ಹಾಡುಗಳು ಮತ್ತು ಪ್ರತಿ ಸಿನಿಮಾದಲ್ಲಿ ನಟ ಮಹೇಶ್ ಬಾಬು ಅವರು ಚಾಕೊಲೇಟ್ ಬಾಯ್ ಹಾಗೂ ವೈಲೆಂಟ್ ಹೀರೋ, ಈ ಎರಡೂ ಅವರತಾರಗಳಲ್ಲಿ ಕಾಣಿಸಿಕೊಳ್ಳುವುದು. ಈಗ ಶಿವರಾತ್ರಿಗೆ 'ಸರ್ಕಾರು ವಾರಿ ಪಾಟ'ದ ಸಿನಿಮಾದಲ್ಲಿನ ನಟ ಮಹೇಶ್ ಅವರ ಮಾಸ್ ಲುಕ್ ಅನ್ನು ಬಹಿರಂಗ ಪಡಿಸಲಾಗಿದೆ. ಮಹೇಶ್ ಅಭಿನಯಿಸಿರುವ 'ಸರ್ಕಾರು ವಾರಿ ಪಾಟ' ಚಿತ್ರವನ್ನು ನಿರ್ಮಿಸಿದ ಸಂಸ್ಥೆ ಮಾಸ್ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ.
ಇದರಲ್ಲಿ, ಚೆಕ್ಸ್ ಶರ್ಟ್ ಹಾಕಿರುವ ನಟ ಮಹೇಶ್ ಬಾಬು ಫೈಟಿಂಗ್ ಮಾಡುವ ದೃಶ್ಯವಿದೆ. ನಟನ ಈ ಮಾಸ್ ಅವತಾರ ಅವರ ಅಭಿಮಾನಿಗಳಿಗೆ ಮಸ್ತ್ ಕಿಕ್ ಕೊಟ್ಟಿದೆ. ಶಿವರಾತ್ರಿ ಹಬ್ಬಕ್ಕೆ ತಕ್ಕಂತಹ ಪೋಸ್ಟರ್ ರಿಲೀಸ್ ಮಾಡಿದ್ದಕ್ಕೆ ಪ್ರಿನ್ಸ್ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ, ಇನ್ನು, 'ಸರ್ಕಾರು ವಾರಿ ಪಾಟ' ಮೇ 12ಕ್ಕೆ ತೆರೆಗಪ್ಪಳಿಸಲಿದೆ. ಟಾಲಿವುಡ್ ಪ್ರಿನ್ಸ್ ಹಾಗೂ ನಟಿ ಕೀರ್ತಿ ಸುರೇಶ್ ಕಾಂಬಿನೇಷನ್​ನ ಮೊದಲ ಸಿನಿಮಾ ಇದಾಗಿದ್ದು, 'ಕಲವಾತಿ' ಹಾಡು ಸಹ ನೋಡಿದ್ದು, ಅಭಿಮಾನಿಗಳು ಈ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net