ಕಾಶ್ಮೀರದಲ್ಲಿ ಮಾರ್ಟಿನ್; ಕಣಿವೆ ರಾಜ್ಯದಲ್ಲಿ ಸಾಹಸ..

Martin
Published on

ಬೆಂಗಳೂರು: ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಬಗ್ಗೆ ಇತ್ತೀಚಿನ ಕೆಲ ದಿನಗಳಿಂದ ಯಾವುದೇ ಸುದ್ದಿ ಇರಲಿಲ್ಲ. ಇದೀಗ ಶೂಟಿಂಗ್​ನಲ್ಲಿ ತಂಡ ಬಿಜಿಯಾಗಿದ್ದು, ಕಣಿವೆ ರಾಜ್ಯದಲ್ಲಿ ಬೀಡು ಬಿಟ್ಟಿದೆ. ಚಿತ್ರದ ಒಂದಷ್ಟು ಭಾಗದ ಸಾಹಸ ದೃಶ್ಯಗಳನ್ನು ಕಾಶ್ಮೀರದಲ್ಲಿ ಸೆರೆಹಿಡಿಯಲಾಗುತ್ತಿದೆ. ನಾಯಕ ಧ್ರುವ ಜತೆಗೆ ಚಿತ್ರದ ನಾಯಕಿ ವೈಭವಿ ಶಾಂಡಿಲ್ಯ ಸಹ ಜತೆಯಾಗಿದ್ದಾರೆ.

ಎ.ಪಿ. ಅರ್ಜುನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಮಾರ್ಟಿನ್’ ಸಿನಿಮಾ ಕಳೆದ ವರ್ಷವೇ ಸೆಟ್ಟೇರಿತ್ತು. ಸದ್ದಿಲ್ಲದೆ, ಶೂಟಿಂಗ್​ಗೂ ಚಿತ್ರತಂಡ ಚಾಲನೆ ನೀಡಿತ್ತು. ಆದರೆ, ಸಿನಿಮಾ ಯಾವ ಹಂತದಲ್ಲಿದೆ, ಯಾರೆಲ್ಲ ಕಲಾವಿದರು ತಂಡ ಸೇರಿಕೊಂಡರು ಎಂಬಿತ್ಯಾದಿ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ಒಂದೊಂದಾಗಿ ಮಾಹಿತಿ ಲಭ್ಯವಾಗುತ್ತಿದೆ. ಕಳೆದ 15 ದಿನಗಳಿಂದ ಕಾಶ್ಮೀರದ ಕಣಿವೆಗಳಲ್ಲಿ ಸಾಹಸ ದೃಶ್ಯ ಮತ್ತು ಮಾತಿನ ಭಾಗದ ಶೂಟಿಂಗ್ ನಡೆಯುತ್ತಿದೆ.

ಈಗಾಗಲೇ ಚಿತ್ರದ ಶೇ. 65ರಷ್ಟು ಚಿತ್ರೀಕರಣವೂ ಮುಗಿದಿದೆ. ಹಾಸ್ಯ ನಟ ಚಿಕ್ಕಣ್ಣ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದು, ಅವರೂ ಸಹ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಉದಯ್ ಕೆ. ಮೆಹ್ತಾ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಕನ್ನಡದ ಜತೆಗೆ ತೆಲುಗು, ತಮಿಳು ಮಲಯಾಳಂ ಮತ್ತು ಹಿಂದಿಯಲ್ಲಿ ಮೂಡಿಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net