ಧನಂಜಯ-ರಚಿತಾ ರಾಮ್ ಅಭಿನಯದ ಮಾನ್ಸೂನ್ ರಾಗ ಟೀಸರ್ ಬಂತು

Mansoon Raga
Published on

ಬೆಂಗಳೂರು: ‘ಡಾಲಿ’ ಧನಂಜಯ ಮತ್ತು ರಚಿತಾ ರಾಮ್ ಅಭಿನಯದ ‘ಮಾನ್ಸೂನ್ ರಾಗ’ ಚಿತ್ರದ ಚಿತ್ರೀಕರಣ ಕಳೆದ ವರ್ಷ ಮೊದಲ ಲಾಕ್​ಡೌನ್ ಮುಗಿದ ನಂತರವೇ ಸದ್ದಿಲ್ಲದೆ ಮುಗಿದಿತ್ತು. ಇಷ್ಟು ದಿನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಚಿತ್ರತಂಡ, ಇದೀಗ ಮೊದಲ ಟೀಸರ್ ಬಿಡುಗಡೆ ಮಾಡಿದೆ. ಈ ಮೊದಲೇ ಚಿತ್ರಕ್ಕೆ ‘ಮಾನ್ಸೂನ್ ರಾಗ’ ಎಂಬ ಶೀರ್ಷಿಕೆ ಅಂತಿಮವಾಗಿತ್ತಾದರೂ, ತಂಡದಿಂದ ಅಧಿಕೃತ ಪೋಸ್ಟರ್ ಹೊರಬಿದ್ದಿರಲಿಲ್ಲ. ಇದೀಗ ಪೋಸ್ಟರ್ ಜತೆಗೆ ಟೀಸರ್ ಸಹ ರಿಲೀಸ್ ಆಗಿದೆ.

ಟೀಸರ್​ನಲ್ಲಿ 80ರ ದಶಕದ ಸೊಗಡಿದೆ. ಮಳೆ, ನೆರಳು ಬೆಳಕಿನಾಟದಲ್ಲಿ ದೃಶ್ಯಗಳು ಇಲ್ಲಿಯೂ ಮೂಡಿಬಂದಿವೆ. ವಿಖ್ಯಾತ್ ಸ್ಟುಡಿಯೋಸ್ ಸಂಸ್ಥೆಯಡಿ ನಿರ್ವಣವಾಗಿರುವ ‘ಮಾನ್ಸೂನ್ ರಾಗ’ ಚಿತ್ರವನ್ನು ಎಸ್. ರವೀಂದ್ರನಾಥ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ವಿಖ್ಯಾತ್ ಸ್ಟುಡಿಯೋಸ್ ಬ್ಯಾನರ್​ನಲ್ಲಿಯೇ ಮೂಡಿಬಂದಿದ್ದ ‘ಪುಷ್ಪಕ ವಿಮಾನ’ ಚಿತ್ರವನ್ನೂ ಇವರೇ ನಿರ್ದೇಶನ ಮಾಡಿದ್ದರು. ಛಾಯಾಗ್ರಹಣ ಎಸ್.ಕೆ ರಾವ್, ಅನೂಪ್ ಸೀಳಿನ್ ಸಂಗೀತ, ಹರೀಶ್ ಕೊಮ್ಮೆ ಸಂಕಲನ ಮಾಡಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net