ನಾಸಿರುದ್ದೀನ್ ಶಾ ಅವರಿಗೆ 'ಕೇರಳ ಸ್ಟೋರಿ' ಬಗ್ಗೆ ಸಮಸ್ಯೆಯಿದ್ದರೆ ಕೋರ್ಟ್​ಗೆ ಹೋಗಲಿ: ಮನೋಜ್ ತಿವಾರಿ

the kerala story
Published on

ನವದೆಹಲಿ: 'ದ ಕೇರಳ ಸ್ಟೋರಿ'(The Kerala Story) ಚಿತ್ರದ ಕುರಿತು ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ(Naseeruddin Shah) ನೀಡಿದ ಹೇಳಿಕೆಯನ್ನು ನಟ, ರಾಜಕಾರಣಿ ಮನೋಜ್ ತಿವಾರಿ ಖಂಡಿಸಿದ್ದಾರೆ.

ದ ಕೇರಳ ಸ್ಟೋರಿ ಚಿತ್ರದ ಬಾಕ್ಸ್​ ಆಫೀಸ್(Box Office)​ ಸಕ್ಸಸ್ ಬಗ್ಗೆ ಪ್ರತಿಕ್ರಿಯೆ ನೀಡಿದ ನಾಸಿರುದ್ದೀನ್ ಶಾ, ಇದೊಂದು 'ಅಪಾಯದ ಟ್ರೆಂಡ್' ಎಂದು ಹೇಳಿದ್ದರು. ಈ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಮನೋಜ್ ತಿವಾರಿ(Manoj Tiwari), "ನಾಸಿರುದ್ದೀನ್ ಅವರು ಉತ್ತಮ ನಟರಾಗಿರಬಹುದು, ಆದ್ರೆ ಅವರ ಉದ್ದೇಶ ಸರಿಯಿಲ್ಲ" ಎಂದು ಹೇಳಿದ್ದಾರೆ.

actor

"ನಾನು ತುಂಬ ಬೇಸರದಿಂದ ಈ ಮಾತನ್ನು ಅವರಿಗೆ ಹೇಳುತ್ತಿದ್ದೀನಿ! ದ ಕೇರಳ ಸ್ಟೋರಿ ಚಿತ್ರವನ್ನು ನೈಜ ಘಟನೆ, ದಾಖಲೆಗಳನ್ನು ಆಧರಿಸಿ ರೂಪಿಸಲಾಗಿದೆ. ನಾಸಿರುದ್ದೀನ್ ಅವರಿಗೆ ಚಿತ್ರದ ಬಗ್ಗೆ ತೊಂದೆರೆ ಇದ್ದರೆ, ನೇರವಾಗಿ ಕೋರ್ಟ್​ಗೆ(Court) ಹೋಗಲಿ" ಎಂದು ಮನೋಜ್ ತಿವಾರಿ ಹೇಳಿದರು.

ಈ ಹಿಂದೆ 'ದ ಕೇರಳ ಸ್ಟೋರಿ' ಚಿತ್ರದ ಬಗ್ಗೆ ನಾಸಿರುದ್ದೀನ್ ಶಾ ಅವರನ್ನು ಪ್ರಶ್ನಿಸಿದಾಗ, "ಭಿದ್, ಅಫ್ವಾಹ್, ಫರಾಜ್ ಮುಂತಾದ ಮೌಲ್ಯಯುತ ಚಿತ್ರಗಳು ಕುಸಿತ ಕಂಡವು, ಯಾರೂ ಆ ಚಿತ್ರಗಳನ್ನು ನೋಡಲು ಹೋಗಲಿಲ್ಲ. ಆದರೆ ಕೇರಳ ಸ್ಟೋರಿ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ನಾನು ಕೇರಳ ಸ್ಟೋರಿ ಬಗ್ಗೆ ಸಾಕಷ್ಟು ಓದಿರುವುದರಿಂದ ಅದನ್ನು ನೋಡಲು ನಾನು ಬಯಸುವುದಿಲ್ಲ! ಮತ್ತೊಂದೆಡೆ ಈ ಚಿತ್ರ ಅಪಾಯದ ಟ್ರೆಂಡ್, ಅದರ ಬಗ್ಗೆ ಅನುಮಾನವೇ ಬೇಡ" ಎಂದು ಹೇಳಿಕೆ ನೀಡಿದ್ದರು.

ನಾಸಿರುದ್ದೀನ್ ಶಾ ಅವರ ಈ ಹೇಳಿಕೆಯನ್ನು ಗುರಿಯಾಗಿಸಿಕೊಂಡ ಮನೋಜ್ ತಿವಾರಿ, ಅವರ ಹೇಳಿಕೆಗೆ ತಮ್ಮ ಅಭಿಪ್ರಾಯದ ಮುಖೇನ ತಿರುಗೇಟು ನೀಡಿದ್ದಾರೆ. ಸದ್ಯ ಮನೋಜ್ ತಿವಾರಿ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ(Social Media) ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net