ಬಿಡುಗಡೆ ಆಯ್ತು ‘ಮಧುರ ಮಧುರವೀ ಮಂಜುಳಗಾನ 2

MANJULA
Published on

ಬೆಂಗಳೂರು: ಕನ್ನಡ ಚಿತ್ರಗೀತೆಗಳ ಸಾಹಿತ್ಯ ಭಂಡಾರದ ‘ಮಧುರ ಮಧುರವೀ ಮಂಜುಳಗಾನ’ದ ಮತ್ತೊಂದು ಸಂಚಿಕೆಯನ್ನು ಸೌಂಡ್ ಆಫ್ ಮ್ಯೂಜಿಕ್ ಸಂಸ್ಥೆ ಸಂಸ್ಥಾಪಕ ಗುರುರಾಜ್ ಹೊರತಂದಿದ್ದಾರೆ. ಈ ಪುಸ್ತಕವನ್ನು ಇತ್ತೀಚೆಗೆ ಚಿತ್ರನಟ ಶರಣ್ ಬಿಡುಗಡೆ ಮಾಡಿದರು.

‘ಗುರುರಾಜ್ ಒಳ್ಳೆಯ ಸ್ನೇಹಿತರು, ತುಂಬ ಪ್ರತಿಭಾವಂತರು. ಒಂದು ಕಾಲದಲ್ಲಿ ಅವರು ಆರ್ಕೆಸ್ಟ್ರಾ ಸ್ಟಾರ್. ಅತ್ಯುತ್ತಮ ಸಿನಿಮಾ ಹಾಡುಗಳ ಸಾಹಿತ್ಯವನ್ನು ಒಂದೆಡೆ ಮುದ್ರಿಸಿ, ಸಂಗೀತ ಪ್ರಿಯರಿಗೆ ತಲುಪಿಸುವ ಅವರ ಕೆಲಸ ಮೆಚ್ಚುವಂಥದ್ದು’ ಎಂದರು ನಟ ಶರಣ್. ‘ಮೊದಲ ಸಂಪುಟವನ್ನು ಗಾಯಕ ಡಾ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಬಿಡುಗಡೆ ಮಾಡಿದ್ದರು. ಸುಮಾರು 6,000 ಪ್ರತಿ ಮಾರಾಟ ಆಗಿತ್ತು.

ಈಗ ‘ಮಧುರ ಮಧುರವೀ ಮಂಜುಳ ಗಾನ-ಭಾಗ 2’ ಹಲವು ವಿಶೇಷತೆ ಒಳಗೊಂಡಿದೆ. ಸಿನಿಮಾ ಹಾಡುಗಳ ಸಾಹಿತ್ಯ ಜತೆಗೆ ಸಾಹಿತಿ, ಗಾಯಕ, ಸಂಗೀತ ನಿರ್ದೇಶಕರ ವಿವರ ಕೂಡ ಇಲ್ಲಿದೆ. ಮೊದಲ ಪುಸ್ತಕಕ್ಕೆ ಒಳ್ಳೆಯ ಬೆಂಬಲ, ಪ್ರತಿಕ್ರಿಯೆ ಸಿಕ್ಕಿತು. ಹೀಗಾಗಿ ಹಲವು ವರ್ಷಗಳ ಅವಿರತ ಶ್ರಮದಿಂದ ಎರಡನೇ ಭಾಗ ಹೊರ ತಂದಿದ್ದೇನೆ.

ಇಲ್ಲಿ ಸಿನಿಮಾ ಹಾಡುಗಳ ಸಾಹಿತ್ಯದ ಜತೆಗೆ ಭಾವಗೀತೆ, ಭಕ್ತಿಗೀತೆ, ಜನಪದ ಗೀತೆ, ದೇಶಭಕ್ತಿ ಗೀತೆಗಳ ಸಾಹಿತ್ಯ ಕೂಡ ಇದೆ ಎಂದು ತಿಳಿಸಿದರು ಗುರುರಾಜ್. ಗುರುರಾಜ್ ಅವರ ಗೆಳೆಯ ರಮಾಕಾಂತ್, ಪುತ್ರ ಸಾಗರ್ ಸೇರಿ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net