ಯಶಸ್​​ಗೆ 'ಸ್ತ್ರೀ ವ್ಯಾಮೋಹವಿರುವ ಕಳ್ಳ ನಾಯಿ' ಎಂದ ಮಂಜ; 'ನಿನಗೆ ಗಂಡು ವ್ಯಾಮೋಹನಾ?' ಎಂದು ಟಾಂಗ್..BBK 13

ಯಶಸ್​​ಗೆ 'ಸ್ತ್ರೀ ವ್ಯಾಮೋಹವಿರುವ ಕಳ್ಳ ನಾಯಿ' ಎಂದ ಮಂಜ; 'ನಿನಗೆ ಗಂಡು ವ್ಯಾಮೋಹನಾ?' ಎಂದು ಟಾಂಗ್..BBK 13
Published on: 
  • ಗಂಧರ್ವರು VS ರಾಕ್ಷಸರ ಆಟದ ನಡುವೆ ತಾರಕಕ್ಕೇರಿದ ವೈಯಕ್ತಿಕ ಜಟಾಪಟಿ.

  • ಯಶಸ್​​ಗೆ ಸ್ತ್ರೀ ವ್ಯಾಮೋಹವಿರುವ ಕಳ್ಳ ನಾಯಿ ಎಂದ ಮಂಜ.

  • "ನಿನಗೆ ಗಂಡು ವ್ಯಮೋಹನಾ?" ಎಂದು ಮಂಜುಗೆ ತಿರುಗೇಟು ನೀಡಿದ ಯಶಸ್.

Manju Crosses Limits WithYashas: ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗುವ ಮುನ್ನ ಸ್ಪರ್ಧಿ ಲಿಖಿತ್ ಗೊಂದಿ, 'ಮನೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ ನಡೆಯುತ್ತಿದೆ' ಎಂದು ಕಿಚ್ಚ ಸುದೀಪ್ ಮುಂದೆ ಹೇಳಿದ್ದರು. ಅದರಂತೆ ಯಶಸ್​ ಸಹ ಆಸಿಯಾ ಹಾಗೂ ಸೌಂದರ್ಯ ಜೊತೆ ಫ್ಲರ್ಟ್ ಮಾಡುತ್ತಿದ್ದರು. ಇದೀಗ ಗಾನವಿ ಜೊತೆ ಕ್ಲೋಸ್ ಆಗಿ ಮಾತನಾಡುತ್ತಿದ್ದಾರೆ. ಯಶಸ್ ನ ಈ ನಡೆಯನ್ನು ಗುರಿಯಾಗಿಸಿಕೊಂಡ ಮಂಜ, 'ಸ್ತ್ರೀ ವ್ಯಾಮೋಹವಿರುವ ಕಳ್ಳ ನಾಯಿ' ಎಂದು ಟೀಕೆ ಮಾಡಿದ್ದಾರೆ. ಮಂಜು ಅವರ ಈ ಹೇಳಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ದೊಡ್ಮನೆಯಲ್ಲಿ ‘ರಾಕ್ಷಸರು vs ಗಂಧರ್ವರು’ ಎನ್ನುವ ಟಾಸ್ಕ್​ ತರಲಾಗಿದೆ. ಇದ್ರಲ್ಲಿ ರಾಕ್ಷಸನಾದ ಮಂಜ, ಗಂಧರ್ವ ಯಶಸ್​ ಅನ್ನು ಸ್ವಿಮ್ಮಿಂಗ್​ ಪೂಲ್​ಗೆ ತಳ್ಳಿದ್ದರು. ಮಾತನಾಡಿಕೊಳ್ಳುವ ಭರದಲ್ಲಿ ಮಂಜ 'ಸ್ತ್ರೀ ವ್ಯಾಮೋಹವಿರುವ ಕಳ್ಳ ನಾಯಿ' ಎಂದು ಅತಿರೇಕವಾಗಿ ಮಾತನಾಡಿದ್ದು, ನೋಡುಗರಿಗೆ ಸಿಟ್ಟೆಬ್ಬಿಸಿದೆ. ಆದರೆ, ನೆಟ್ಟಿಗರು ಮಂಜ ಸರಿಯಾಗಿಯೇ ಹೇಳಿದ್ದಾರೆ. ತಪ್ಪಿಲ್ಲ. ಮಂಜ ಹಾಗೆ ಮಾತನಾಡಲು ಯಶಸ್​​ ಕಾರಣ, ಟ್ರಿಗರ್​ ಮಾಡಿದ್ದು ಮೊದಲು ಅವರೇ ಎಂದಿದ್ದಾರೆ.

ಪ್ರೋಮೋದಲ್ಲಿ ಏನಿದೆ?

'ರಾಕ್ಷಸರು vs ಗಂಧರ್ವರು’ ಆಟದ ಭರದಲ್ಲಿ ಮಂಜ ಹಾಗೂ ಯಶಸ್​​ ಸ್ತ್ರೀ ವ್ಯಾಮೋಹವಿರುವ ಕಳ್ಳ ನಾಯಿ ಎಂದಿದ್ದಾರೆ. ಅಲ್ಲಿಯವರೆಗೂ ಹಾರ್ಟ್ ಕೊಟ್ಟು ನಗಾಡುತ್ತಿದ್ದ ಯಶಸ್​​ ಮುಖ ಬಾಡಿತ್ತು. ನಂತರ ಟಾಂಗ್​​ ಕೊಟ್ಟ ಯಶಸ್‌, "ಹೌದಾ..? ಹಾಗಾದ್ರೆ ನಿಮಗೇನು ಪುರುಷ ಮೋಹ ಇದೆಯೇ..?”ಎಂದು ಪ್ರಶ್ನೆ ಮಾಡಿದರು. ರಾತ್ರಿ ಈ ಬಗ್ಗೆ ಯಶಸ್ ಚರ್ಚೆ ಮಾಡಿದ್ದಾರೆ. ಜನ ನೋಡ್ತಿರ್ತಾರೆ ಏನೇನೋ ಸ್ಟೇಟ್​ಮೆಂಟ್ ಕೊಡ್ಬೇಡ ಮಂಜ, ಮಾತಿನ ಮೇಲೆ ನಿಗಾ ಇರಲಿ ಎಂದಿದ್ದಾರೆ. ಸದ್ಯ ಈ ಪ್ರೋಮೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಕಣ್ಣೀರು ಹಾಕಿದ ಯಶಸ್

ಮಂಜನ ಈ ಮಾತಿಗೆ ಯಶಸ್​​ ಗಾರ್ಡನ್​ ಏರಿಯಾದಲ್ಲಿ ಕುಳಿತು ಕಣ್ಣೀರು ಹಾಕಿದ್ದಾರೆ. ಪ್ರತಿ ಬಾರಿ ಮಾತನಾಡುವ ಮಾತಿನಲ್ಲಿ ಎಚ್ಚರಿಕೆಯಿಂದ ಇರಿ ಎನ್ನಲಾಗುತ್ತದೆ. ಆದರೆ, ಪ್ರತಿ ಬಾರಿ ಪ್ರತಿ ಸ್ಪರ್ಧಿಗಳು ಇದನ್ನು ಕಡೆಗಣನೆ ಮಾಡುತ್ತಾರೆ. ಈ ವೀಕೆಂಡ್​ನಲ್ಲಿ ಈ ವಿಚಾರ ಚರ್ಚೆಯಾಗುತ್ತದೆಯಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಯಶಸ್ ಫರ್ಟಿಂಗ್ ಸ್ವಭಾವ ರಿವೀಲ್

ಸುದೀಪ್​ ಮುಂದೆಯೂ ಫ್ಲರ್ಟಿಂಗ್​ ಗುಟ್ಟು ಬಿಚ್ಚಿಟ್ಟಿದ್ದರು ಮಂಜು. ವೀಕೆಂಡ್​ನಲ್ಲಿ ಕವನ ಹೇಳಿದ್ದ ಮಂಜು ಅವರು ಆಸಿಯಾ ಹಾಗೂ ಸೌಂದರ್ಯ ಮತ್ತು ಯಶಸ್​​ನ್ನು ಗುರಿಯಾಗಿಸಿಕೊಂಡು ಫ್ಲರ್ಟಿಂಗ್ ಸ್ವಭಾವವನ್ನು ಮುಂದಿಟ್ಟಿದ್ದರು. 'ಆಸಿಯಾ ಸೌಂದರ್ಯಗಿಂತ ನೀವೆ ವಾಸಿ, ಆದರೆ ನೀವು ಯಶಸ್ ಮನದರಸಿ' ಎಂದಿದ್ದರು. ಇದಕ್ಕೆ ಸ್ಪರ್ಧಿಗಳು ಸುದೀಪ್​ ನಕ್ಕಿದ್ದರು.

ನೆಟ್ಟಿಗರು ಏನಂದ್ರು?

ಯಶಸ್ ಅವರು ಮಂಜನನ್ನು ಆ ರೇಂಜ್‌ಗೆ ಟ್ರಿಗರ್ ಮಾಡಿದ್ದಾರೆ.ಗಂಧರ್ವನಾಗಿ ಅವರು ವಿಷಯಗಳನ್ನು ವಿರೋಧಿಸಬಹುದು, ಆದರೆ ರಾಕ್ಷಸರನ್ನು ಎಂಬ್ರೇಸ್ ಮಾಡಲು ಆಗಲ್ಲ.ಯಾವಾಗಲೂ ಹುಡುಗಿಯರ ಬಗ್ಗೆಯೇ ಯೋಚನೆ ಮಾಡಿದರೆ ಇನ್ನೇನು ಅಂತಾರೆ? ಮಂಜ ಹಾಗೆ ಅಂದಾಗ "ಮಂಜ ನಿನಗೆ ಗಂಡು ವ್ಯಾಮೋಹನಾ" ಅಂತನೇ ಯಶಸ್ ಸಹ ಹೀಗೆಂದು ಮನು ಎಂಬುವವರು ಟ್ವೀಟ್ ಮಾಡಿದ್ದಾರೆ. ಇನ್ನು ಆರು ಎನ್ನುವವರು ಕಾಮೆಂಟ್ ಮಾಡಿದ್ದು, ಇದ್ದಿದ್ ಇದ್ದಂಗ್ ಹೇಳುದ್ರೆ ಎದ್ ಬಂದ್ ಎದೆಗೆ ಒದ್ದರಂತೆ ಎಂದು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net