ಮಲಯಾಳಂ ಚಿತ್ರರಂಗದಲ್ಲಿ ಮುಗಿಯದ ಮೀಟೂ ವಿವಾದ : ನಿರ್ದೇಶಕನ ವಿರುದ್ಧ ನಟಿ ಮಂಜು ವಾರಿಯರ್​ ದೂರು

c
Published on

ಕಳೆದ ವರ್ಷ ಮಲಯಾಳಂ ಚಿತ್ರರಂಗ ಸಿನಿಮಾಗಳಿಂದ ಮಾತ್ರವಲ್ಲದೇ ಮೀಟೂ ವಿವಾದಗಳಿಂದಲೂ ಹೆಚ್ಚು ಸದ್ದು ಮಾಡಿತ್ತು. ಬ್ಯಾಕ್​ ಟು ಬ್ಯಾಕ್​ ಚಿತ್ರಗಳು ಹಿಟ್​ ಆದ ರೀತಿಯಲ್ಲೇ, ಪೊಲೀಸ್​ ಠಾಣೆಯಲ್ಲಿ ದೂರುಗಳೂ ದಾಖಲಾಗಿದ್ದವು. ಈ ಹೊಸ ವರ್ಷಕ್ಕಾದರೂ ಈ ವಿವಾದ ನಿಲ್ಲುತ್ತಾ ಅಂದುಕೊಂಡರೆ, ಆ ಮಾತು ಸುಳ್ಳಾಗಿದೆ. ಇದೀಗ "ಸೆಕ್ಸಿ ದುರ್ಗ', "ಚೋಳ', "ವಳಕ್ಕು' ಚಿತ್ರಗಳ ನಿರ್ದೇಶಕ ಸನಾಲ್​ ಕುಮಾರ್​ ಸಸಿಧರನ್​ ವಿರುದ್ಧ 40ಕ್ಕೂ ಅಧಿಕ ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಮಂಜು ವಾರಿಯರ್​ ದೂರು ದಾಖಲಿಸಿದ್ದಾರೆ.

ನಿರ್ದೇಶಕ ವಿನಾ ಕಾರಣ ನನಗೆ ಕಿರುಕುಳ ನೀಡುತ್ತಿದ್ದಾರೆಂದು ಕೊಚ್ಚಿ ಪೊಲೀಸ್​ ಠಾಣೆಯಲ್ಲಿ ಎಫ್​​ಐಆರ್​ ದಾಖಲಿಸಿದ್ದಾರೆ. ಸದ್ಯ ಸನಾಲ್​ ಅಮೆರಿಕದಲ್ಲಿದ್ದು, ವಿಚಾರಣೆಗಾಗಿ ಅವರನ್ನು ಭಾರತಕ್ಕೆ ಕರೆಸಿಕೊಳ್ಳಲು ಕೊಚ್ಚಿ ಪೊಲೀಸರು ಅಲ್ಲಿನ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಹಾಗಂತ ಇದು ಮಂಜು ವಾರಿಯರ್​, ಸನಲ್​ ವಿರುದ್ಧ ನೀಡಿರುವ ಎರಡನೇ ದೂರು.

2020ರಲ್ಲಿ ಸನಲ್​ ನಿರ್ದೇಶಿಸಿದ್ದ ಚಿತ್ರದಲ್ಲಿ ಮಂಜು ವಾರಿಯರ್​ ನಟಿಸಿದ್ದರು. ಆಗಿನಿಂದಲೂ ಮಂಜು ವಾರಿಯರ್​ ಜತೆ ಸಲುಗೆ ಬೆಳೆಸಿಕೊಳ್ಳಲು ಸನಲ್​ ಪ್ರಯತ್ನಿಸುತ್ತಿದ್ದು, ಅದಕ್ಕೆ ನಟಿ ಒಪ್ಪದಿದ್ದಾಗ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಹೀಗಾಗಿಯೇ 2022ರಲ್ಲಿ ಮಂಜು ವಾರಿಯರ್​, ಸನಲ್​ ವಿರುದ್ಧ ದೂರು ದಾಖಲಿಸಿದ್ದರು. ಆಗ ಬಂಧನಕ್ಕೊಳಗಾಗಿದ್ದ ಸನಲ್​ ನಂತರ ಬೇಲ್​ ಪಡೆದು ಹೊರಬಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net