ಮಲೈಕಾಗೆ ಮೊದಲನೇ ಪತಿಯಿಂದ ಗಿಫ್ಟ್​! ಅಂತದ್ದೇನಿದೆ ಆ ಗಿಫ್ಟ್​ ಬಾಕ್ಸ್​ನಲ್ಲಿ?

malaika
Published on

ಮುಂಬೈ: ಬಾಲಿವುಡ್​ ನಟಿ ಮಲೈಕಾ ಅರೋರಾ ಯಾರಿಗೆ ತಾನೆ ಗೊತ್ತಿಲ್ಲ? ಅರ್ಬಾಜ್​ ಖಾನ್​ ಜತೆ ವಿಚ್ಛೇದನ ಪಡೆದ ಮೇಲೆ ಅರ್ಜುನ್​ ಕಪೂರ್​ ಜತೆ ಪ್ರೀತಿ ಬೆಳೆಸಿರುವ ಮಲೈಕಾ ಸದಾ ಸುದ್ದಿಯಲ್ಲಿರುವಂತವರು. ಈ ನಟಿಗೆ ಅವರ ಮೊದಲನೇ ಪತಿ ಅರ್ಬಾಜ್​ ಏನೋ ಗಿಫ್ಟ್​ ಕಳುಹಿಸಿಕೊಟ್ಟಿದ್ದಾರಂತೆ.

ಮಲೈಕಾ ಮತ್ತು ಅರ್ಬಾಜ್​ ವಿಚ್ಛೇದನವಾದ ನಂತರವೂ ಸಂಪರ್ಕದಲ್ಲಿದ್ದಾರೆ. ಇದೀಗ ಮಾವಿನ ಹಣ್ಣಿನ ಸೀಸನ್​ ಆರಂಭವಾಗಿರುವ ಹಿನ್ನೆಲೆಯಲ್ಲಿ ಒಂದು ಬಾಕ್ಸ್ ಮಾವಿನ ಹಣ್ಣನ್ನು ಅರ್ಬಾಜ್​, ಮಲೈಕಾಗೆ ಗಿಫ್ಟ್ ರೂಪದಲ್ಲಿ ಕಳುಹಿಸಿಕೊಟ್ಟಿದ್ದಾರಂತೆ. ಈ ವಿಚಾರವನ್ನು ಸ್ವತಃ ಮಲೈಕಾ ಅವರೇ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಮ್ಯಾಂಗೋ ಗಿಫ್ಟ್​ಗೆ ಥ್ಯಾಂಕ್ಸ್​ ಅರ್ಬಾಜ್​ ಎಂದು ಬರೆದುಕೊಂಡಿದ್ದಾರೆ.

1998ರಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದ ಮಲೈಕಾ ಮತ್ತು ಅರ್ಬಾಜ್​ 18 ವರ್ಷಗಳ ನಂತರ ವಿಚ್ಛೇದನ ಪಡೆದಿದ್ದರು. ವಿಚ್ಛೇದನಕ್ಕೆ ನಿಖರ ಕಾರಣವನ್ನು ಈವರೆಗೂ ಎಲ್ಲಿಯೂ ತಿಳಿಸಿಲ್ಲ. ಅದಾದ ನಂತರ ಮಲೈಕಾ ಅವರು ಅರ್ಜುನ್​ ಕಪೂರ್​ನೊಂದಿಗೆ ಪ್ರೀತಿಯ ಬಲೆಗೆ ಬಿದ್ದರೆ, ಅರ್ಬಾಜ್​ ಜಾರ್ಜಿಯಾ ಜತೆ ಪ್ರೀತಿಯಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net