ನೇರವಾಗಿ ಆನ್​ಲೈನ್​ನಲ್ಲಿ ರಿಲೀಸ್​ ಆಗಲಿದೆಯಾ ರಣವೀರ್​ ಸಿಂಗ್​-ದೀಪಿಕಾ ನಟನೆಯ ‘83’ ಸಿನಿಮಾ?

83-Ranveer-Deepika
Published on

ಚಿತ್ರರಂಗದ ಸದ್ಯದ ಸ್ಥಿತಿಗತಿ ಅತಂತ್ರವಾಗಿದೆ. ಬಿಡುಗಡೆ ಆಗಬೇಕಿರುವ ಸಿನಿಮಾಗಳ ಪಟ್ಟಿ ದೊಡ್ಡದಿದೆಯಾದರೂ, ಅವೆಲ್ಲವೂ ಚಿತ್ರಮಂದಿರಕ್ಕೆ ಬರಬೇಕೆಂದರೆ, ಏನಿಲ್ಲ ಅಂದರೂ ನಾಲ್ಕೈದು ತಿಂಗಳುಗಳೇ ಬೇಕು. ಹೀಗಿರುವಾಗ ಒಂದಷ್ಟು ಮಂದಿ ಓಟಿಟಿ ಮೊರೆ ಹೋಗುತ್ತಿದ್ದಾರೆ. ನೇರವಾಗಿ ಆನ್​ಲೈನ್​ನಲ್ಲಿ ಬಿಡುಗಡೆ ಆಗುತ್ತಿವೆ. ಈಗ ಆ ಸಿನಿಮಾಗಳ ಸಾಲಿಗೆ ಬಾಲಿವುಡ್​ನ ಬಿಗ್ ಬಜೆಟ್​ನ ‘83’ ಚಿತ್ರ ಸೇರ್ಪಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ!
ಹೌದು, ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್​ 10ರಂದು ಕಬೀರ್ ಖಾನ್​ ನಿರ್ದೇಶನದ 83 ಸಿನಿಮಾ ಬಿಡುಗಡೆ ಆಗಿರುತ್ತಿತ್ತು. ಆದರೆ, ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಹೀಗಿರುವಾಗಲೇ ಇದೇ ಸಿನಿಮಾ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಯಾಗಲಿದೆಯಂತೆ. 143 ಕೋಟಿಗೆ ರೂ ಮೊತ್ತಕ್ಕೆ ಸಿನಿಮಾ ಖರೀದಿಸುವುದಾಗಿ ಪ್ರತಿಷ್ಠಿತ ಓಟಿಟಿ ಸಂಸ್ಥೆಯೊಂದು ಹೇಳಿಕೊಂಡಿದೆ.
ಹಾಗಾದರೆ ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗಲಿದೆಯೇ? ಸದ್ಯಕ್ಕೆ ಆ ಬಗ್ಗೆ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿರುವ ರಿಲಯನ್ಸ್​ ಎಂಟರ್​ಟೈನ್​ಮೆಂಟ್​ ಮಾಹಿತಿ ನೀಡಿದೆ. 83 ಸಿನಿಮಾ ಹಿರಿ ಪರದೆಯಲ್ಲಿಯೇ ಬಿಡುಗಡೆ ಆಗಲಿದೆ. ಯಾವುದೇ ಕಾರಣಕ್ಕೂ ಓಟಿಟಿಗೆ ಬರುವುದಿಲ್ಲ ಎಂದಿದೆ. ಅಂದಹಾಗೆ, ರಣವೀರ್​ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆ ನಿಭಾಯಿಸಿರುವ ಈ ಸಿನಿಮಾಕ್ಕೆ ಸ್ವತಃ ದೀಪಿಕಾ ಹಣ ಹೂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net