ಜೀ ಕನ್ನಡದಲ್ಲಿ ಮಹಾಸಂಗಮ

Maha Sangama
Published on

ಜೀ ಕನ್ನಡದಲ್ಲಿ ಹಲವು ಕಾರ್ಯಕ್ರಮಗಳು ಮತ್ತು ಧಾರಾವಾಹಿಗಳ ‘ಮಹಾಸಂಗಮ’ ಪ್ರಸಾರವಾಗಿದ್ದು, ಈ ವಾರಾಂತ್ಯ ಮತ್ತೆ ಎರಡು ಭರ್ಜರಿ ಶೋಗಳ ಮಹಾಸಂಗಮಕ್ಕೆ ಸಾಕ್ಷಿಯಾಗುತ್ತಿದೆ. ತೀರ್ಪಗಾರರ ಎದೆ ಝುಲ್ಲೆನ್ನಿಸಿ ನೋಡುಗರ ಕಣ್ಣಿಗೆ ವಂಡರ್​ಫುಲ್ ಲೋಕ ಕಟ್ಟಿಕೊಡುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮತ್ತು ಕಾಮಿಡಿಯಲ್ಲೇ ಎಲ್ಲರ ಹೃದಯಕ್ಕೆ ಕಚಗುಳಿ ಇಟ್ಟು ನಗುವಿನಲ್ಲಿ ತೇಲಾಡಿಸುವ ‘ಕಾಮಿಡಿ ಕಿಲಾಡಿಗಳು’ ಸೇರಿ ಹೊಸದೊಂದು ಪ್ರಪಂಚವನ್ನೇ ಪ್ರೇಕ್ಷಕರಿಗೆ ತೋರಿಸಲಿವೆ. ಎರಡೂ ಕಾರ್ಯಕ್ರಮಗಳ ತೀರ್ಪಗಾರರು ಇಲ್ಲಿ ಒಂದಾಗುತ್ತಿರುವುದು ಮನರಂಜನೆಯ ಮತ್ತೊಂದು ಮಜಲು.

ವಿಭಿನ್ನ ಸ್ಪೂಫ್​ಗಳ ಮೂಲಕ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸಲು ಕಿಲಾಡಿಗಳು ಕಾಯುತ್ತಿದ್ದರೆ, ಭರ್ಜರಿ ಸ್ಟೆಪ್​ಗಳ ಮೂಲಕ ರಂಜಿಸೋಕೆ ಡ್ಯಾನ್ಸ್ ಪ್ರತಿಭೆಗಳು ಸಹ ತಯಾರಾಗಿದ್ದಾರೆ. ಇನ್ನು ತೀರ್ಪಗಾರರ ನಕಲು ಬೋನಸ್ ಆಗಿರಲಿದೆ. ಈ ಮನರಂಜನೆಯ ಮಹಾಹಬ್ಬ ಶನಿವಾರ ರಾತ್ರಿ 7.30ಕ್ಕೆ ಮತ್ತು ಭಾನುವಾರ ಸಂಜೆ 6ಕ್ಕೆ ಪ್ರಸಾರವಾಗಲಿದೆ.

ಜೀ ಪಿಚ್ಚರ್​ಗೆ ಒಂದು ವರ್ಷ

ಕನ್ನಡದ ಆಲ್ ಟೈಮ್ ಬ್ಲಾಕ್​ಬಸ್ಟರ್ ಚಿತ್ರವಾದ ಡಾ. ರಾಜಕುಮಾರ್ ಅಭಿನಯದ ‘ಬಂಗಾರದ ಮನುಷ್ಯ’ ಮೂಲಕ ಪ್ರಸಾರ ಶುರುವಾದ, ಜೀ ಪಿಚ್ಚರ್ ವಾಹಿನಿಯು ಒಂದು ವರ್ಷ ಪೂರೈಸುತ್ತಿದೆ. ಕಳೆದ ವರ್ಷ ಮಾರ್ಚ್ ಒಂದರಂದು ಪ್ರಾರಂಭವಾದ ಈ ಚಾನಲ್, ವಿಭಿನ್ನ ಹಾಗೂ ಅಪರೂಪದ ಪಿಚ್ಚರ್​ಗಳ ಮೂಲಕ ಕಳೆದ ಒಂದು ವರ್ಷದಿಂದ ಕನ್ನಡಿಗರನ್ನು ರಂಜಿಸಿ ಸಾರ್ಥಕತೆ ಅನುಭವಿಸಿದೆ. ಜೀ ಪಿಚ್ಚರ್​ನ ಪ್ರಾರಂಭೋತ್ಸವದ ಕೊಡುಗೆಯಾಗಿ, ಭಾರತೀಯ ಕಿರುತೆರೆಯಲ್ಲೇ ಮೊದಲ ಬಾರಿಗೆ 12 ಚಿತ್ರಗಳನ್ನು ಒಂದೇ ಬಾರಿಗೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮಾಡಲಾಗಿತ್ತು. ಆರಂಭದಲ್ಲೇ ಕನ್ನಡ ಚಿತ್ರಗಳ ವಾಹಿನಿಗಳ ರ್ಯಾಂಕಿಂಗ್​ನಲ್ಲಿ ಎರಡನೇ ಸ್ಥಾನಕ್ಕೇರಿದ ಜೀ ಪಿಚ್ಚರ್, ಅಲ್ಲೇ ಗಟ್ಟಿಯಾಗಿ ನೆಲೆಯೂರಿದೆ. ಪ್ರತಿದಿನ ಚಿತ್ರಗಳನ್ನು ಪ್ರಸಾರ ಮಾಡದೇ, ಪ್ರತಿ ವಾರ ಹೊಸ ಶೈಲಿಯ ಕಾರ್ಯಕ್ರಮಗಳ ಮೂಲಕ ಮನರಂಜಿಸುತ್ತಿದೆ. ಐಪಿಎಲ್ ಸಮಯದಲ್ಲಿ ಆಕ್ಷನ್ ಪಿಚ್ಚರ್ ಲೀಗ್, ಜೋಗಿ ಜಾತ್ರೆ, ಕಿಚ್ಚನ ಪಿಚ್ಚರೋತ್ಸವ, ವಿಷ್ಯ-ಉಪ್ಪಿ ಫಿಲ್ಮ ಫೆಸ್ಟ್, ದರ್ಶನ್ ಪಿಚ್ಚರ್ ಪ್ರೖೆಂಟೈಮ್ ನಲವತ್ತರ ನವರಸ, ಸಕಲಕಲಾವಲ್ಲಭ ಸುದೀಪ್ ಮುಂತಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದೆ. ಇದರ ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ಚಿತ್ರರಂಗದ ಡೇ ಟು ಡೇ ಅಪ್​ಡೇಟ್ ನೀಡುವ ‘ಪಿಚ್ಚರ್ ಸುದ್ದಿ’, ‘ಪಿಚ್ಚರ್ ಪಂಟ್ರು’ ಮುಂತಾದ ಕಾರ್ಯಕ್ರಮಗಳ ಮೂಲಕ ಗಮನಸೆಳೆದಿದೆ. ಹೀಗೆ ವರ್ಷವಿಡಿ ವೆರೈಟಿ ಸಿನಿಮಾಗಳು ಮತ್ತು ಕಾರ್ಯಕ್ರಮಗಳ ಮೂಲಕ ರಂಜಿಸಿರುವ ಜೀ ಪಿಚ್ಚರ್, ಎರಡನೇ ವರ್ಷಕ್ಕೆ ಸಾಕಷ್ಟು ಸರ್​ಪ್ರೖೆಸ್​ಗಳ ಜತೆಗೆ ಕಾಲಿಟ್ಟಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net