ಮೇಡಂ ಟುಸ್ಸಾಡ್ಸ್​ನಲ್ಲಿ ನಟಿ ಕಾಜಲ್​ ಅಗರ್ವಾಲ್ ಮೇಣದ ಪ್ರತಿಮೆ: ಬೇಸರ ವ್ಯಕ್ತಪಡಿಸಿದ್ದೇಕೆ ನಟಿ ಹರಿಪ್ರಿಯಾ!​

HAripriya
Published on

ಬೆಂಗಳೂರು: ಮೇಡಂ ಟುಸ್ಸಾಡ್ಸ್​ ಮೇಣದ ಪ್ರತಿಮೆ ಕುರಿತು ನಟಿ ಹರಿಪ್ರಿಯಾ ಟ್ವೀಟ್​ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಮೇಡಂ ಟುಸ್ಸಾಡ್​ನಲ್ಲಿ ಟಾಲಿವುಡ್​ ನಟಿ ಕಾಜಲ್ ಅಗರ್ವಾಲ್​ ಮೇಣದ ಪ್ರತಿಮೆ ಅನಾವರಣಗೊಂಡಿದೆ. ಕುಟುಂಬ ಸಮೇತ ಕಾಜಲ್ ತನ್ನದೇ ಮೇಣದ ಪ್ರತಿಮೆ ಜತೆ ನಿಂತು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳನ್ನು ತಮ್ಮ ಜಾಲತಾಣ ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಇದರ ಬೆನ್ನಲ್ಲೇ ಟ್ವೀಟ್​ ಮಾಡಿರುವ ನಟಿ ಹರಿಪ್ರಿಯಾ ಪರಭಾಷೆಯ ಯುವ ಕಲಾವಿದರ ಸಾಧನೆಗೆ ಮೇಣದ ಪ್ರತಿಮೆ ಮಾಡುತ್ತಿರುವುದು ನನಗೆ ಖುಷಿಯ ವಿಷಯಾನೇ. ಆದರೆ, ಅನುಭವದ ಸ್ಟಾರ್ ನಟ-ನಟಿಯರ ಸಾಧನೆಯನ್ನು ಮೊದಲು ಪರಿಗಣಿಸಬೇಕು. ಈವರೆಗೂ ಕನ್ನಡದ ಯಾವೊಬ್ಬ ನಟ-ನಟಿಯರಿಗೆ ಈ ಗೌರವವನ್ನು ನೀಡಿಲ್ಲ. ಕನ್ನಡ ಕಲಾವಿದರನ್ನು ನಿರ್ಲಕ್ಷಿಸಬಾರದು.

ಕನ್ನಡ ಚಿತ್ರರಂಗದ ಡಾ.ರಾಜ್​ಕುಮಾರ್​, ವಿಷ್ಣುವರ್ಧನ್​, ಅಂಬರೀಷ್​, ಶಂಕರ್ ನಾಗ್, ಪಂಡರೀಬಾಯಿ, ಜಯಂತಿ, ಬಿ.ಸರೋಜಾದೇವಿ, ಕಲ್ಪನಾ ಹಾಗೂ ಮಂಜುಳಾ ಅವರು ಚಿತ್ರರಂಗಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅವರ ಹಾದಿಯಲ್ಲೇ ಸಾಕಷ್ಟು ಯುವ ಕಲಾವಿದರು ನಡೆದು ಬಂದಿದ್ದಾರೆ. ಯುವ ಕಲಾವಿದರಿಗಿಂತ ಹಿರಿಯ ಕಲಾವಿದರು ಈ ಗೌರವಕ್ಕೆ ತುಂಬಾ ಅರ್ಹರಾಗಿದ್ದಾರೆ. ಇದನ್ನು ನೀವು ನಂಬುತ್ತೀರಾ ಅಲ್ವಾ? ಎಂದು ಹೇಳುವ ಮೂಲಕ ಹರಿಪ್ರಿಯ ಬೇಸರದಿಂದಲೇ ಟ್ವೀಟ್​ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net