'ಮಾ ಇಂಟಿ ಬಂಗಾರಂ' ಸಿನಿಮಾಗಾಗಿ ಹೆಚ್ಚು ಸಂಭಾವನೆ ಪಡೆದಿದ್ಯಾರು ಗೊತ್ತಾ?: ದಿಗಂತ್​​, ಸಮಂತಾ ಅಲ್ವೇ ಅಲ್ಲ, ಈ ನಟಿ ನೋಡಿ..Maa Inti Bangaram

Maa Inti Bangaram Cast Fees
Maa Inti Bangaram Cast Fees
Published on

ಪ್ರಮುಖ ಮುಖ್ಯಾಂಶಗಳು

  • ದೇಶದಾದ್ಯಂತ ಮಾ ಇಂಟಿ ಬಂಗಾರಂ ಸಿನಿಮಾ ರಿಲೀಸ್​​, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ
  • ಮಾ ಇಂಟಿ ಬಂಗಾರಂನಲ್ಲಿ ನಟಿಸಿದ ಸೆಲಬ್ರೆಟಿಗಳಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ
  • ಹೆಚ್ಚು ಸಂಭಾವನೆ ಪಡೆದಿರುವುದು ಸಮಂತಾ ಅಲ್ಲ ದಿಗಂತ್​ ಅಲ್ವೇ ಅಲ್ಲ.. ಇವ್ರೇ ನೋಡಿ ಆ ನಟಿ!
Maa Inti Bangaram Cast Fees:
ಇಂದಿನಿಂದ ದೇಶದಾದ್ಯಂತ 'ಮಾ ಇಂಟಿ ಬಂಗಾರಂ' ಸಿನಿಮಾ ರಿಲೀಸ್​ ಆಗಿದೆ. ನಿರ್ದೇಶಕಿ ನಂದಿನಿ ರೆಡ್ಡಿ ಮತ್ತು ಸಮಂತಾ ರುತ್​ ಪ್ರಭು ಕಾಂಬಿನೇಷನ್​ನ ಈ ಎರಡನೇ ಸಿನಿಮಾಗೆ ಈಗಾಗಲೇ ಸಾಕಷ್ಟು ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. ಈ ಮಧ್ಯೆ ಮುನ್ನೆಲೆಗ ಬಂದಿರುವ ವಿಚಾರ ಎಂದರೆ, ಸಿನಿಮಾದ ಪ್ರಮುಖ ಪಾತ್ರಧಾರಿ ಸಮಂತಾ ಹಾಗೂ ನಟ ದಿಗಂತ್​ ಹೆಚ್ಚು ಸಂಭಾವನೆ ಪಡೆದಿಲ್ಲ ಎನ್ನುವುದು.

ಹೌದು, ಆಕ್ಷನ್​ ಥ್ರಿಲ್ಲರ್​, ಫ್ಯಾಮಿಲಿ ಎಂಟರ್​ಟೇನ್​ಮೆಂಟ್​ ಸಿನಿಮಾದಲ್ಲಿ ನಟಿಸಿರುವ ನಟಿ ಸಮಂತಾ ರುತ್​ ಪ್ರಭು, ನಟ ದಿಗಂತ್​ಗಿಂತ ಹೆಚ್ಚು ಸಂಭಾವನೆ ಪಡೆದಿರುವುದು ಹಿರಿಯ ನಟಿ ಹಾಗೂ ರಾಜಕಾರಣಿ ಗೌತಮಿ ತಡಿಮಲ್ಲ ಎನ್ನಲಾಗಿದೆ. ಹಾಗಾದ್ರೆ ಈ ಸಿನಿಮಾದಲ್ಲಿ ನಟಿಸಿದ ನಟ, ನಟಿಯರಿಗೆ ಸಿಕ್ಕ ಸಂಭಾವನೆ ಎಷ್ಟು ಎನ್ನುವುದನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಸಮಂತಾ ಪಡೆದ ಸಂಭಾವನೆ ಎಷ್ಟು?

ಶುಭಂ ಸಿನಿಮಾದ ಮೂಲಕ ನಿರ್ಮಾಪಕಿಯಾಗಿ ಹೊರಬಂದಿದ್ದ ನಟಿ ಸಮಂತಾ ಅವರು ಅಷ್ಟಾಗಿ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿರಲಿಲ್ಲ. ಅವರ ಆರೋಗ್ಯದಲ್ಲಿ ಉಂಟಾದ ಬದಲಾವಣೆ, ನಾಗ ಚೈತನ್ಯರೊಂದಿಗಿನ0 ಡಿವೋರ್ಸ್​, ರಾಜ್​ ನಿಡಿಮೂರುರೊಂದಿಗಿನ ವೈವಾಹಿಕ ಜೀವನಕ್ಕೆ ಕಾಲಿಡುವ ಈ ವಿದ್ಯಮಾನದಲ್ಲಿ ಖುಷಿ ಕೊನೆಯಾಗಿತ್ತು. ಈಗ ಮಾ ಇಂಟಿ ಬಂಗಾರಂ ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿರುವ ಸಮಂತಾ ಅವರು ಎಂಟು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾಹಿತಿ ಸದ್ಯ ಹರಿದಾಡುತ್ತಿದೆ. ಆದರೆ, ಇದೇ ನಿಖರ ಸಂಭಾವನೆಯಲ್ಲ,

ದೂದ್​ಪೇಡ ದಿಗಂತ್​ ಗಳಿಸಿದ್ದೆಷ್ಟು?

ಇಂದಿಗೂ ಎಂದಿಗೂ ಚಾಕ್ಲೆಟ್​ ಬಾಯ್​ನಂತೆ ಕಾಣಿಸಿಕೊಳ್ಳುವ ದಿಗಂತ್​ ಅವರು ಕನ್ನಡದ ನಟ. ಮಾ ಇಂಟಿ ಬಂಗಾರಂ ಮೂಲಕ ಟಾಲಿವುಡ್​ಗೆ ಕಾಲಿಟ್ಟಿರುವ ಅವರು ಸಮಂತಾ ರುತ್​​ ಪ್ರಭು ಅವರ ಪತಿಯಾಗಿ ನಟಿಸಲು ಪಡೆದುಕೊಂಡಿದ್ದು 50 ಲಕ್ಷ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಸಿನಿಮಾ ರಿಲೀಸ್​ಗೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೆಲುಗು ಸಿನಿಮಾದಲ್ಲಿ ಮತ್ತೊಂದು ಚಾನ್ಸ್​ ನೀಡಬೇಕಾಗಿ ಕೇಳಿಕೊಂಡಿರುವುದು ಸ್ಯಾಂಡಲ್​ವುಡ್​ನ ಪರಿಸ್ಥಿತಿ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿದಂತೆ ಕಂಡಿತು.

90ರ ದಶಕದ ಬಹುಬೇಡಿಕೆ ನಟಿ ಗೌತಮಿ ತಡಿಮಲ್ಲ ಸಂಭಾವನೆ ಎಷ್ಟು?

90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದ ಗೌತಮಿ ತಡಿಮಲ್ಲ ಅವರು ನಟಿಯಾಗಿ ಮಾತ್ರವಲ್ಲದೆ ರಾಜಕೀಯದಲ್ಲಿ ತಮ್ಮ ಛಾಪುಮೂಡಿಸಿದ್ದಾರೆ. ಈ ಸಿನಿಮಾದಲ್ಲಿ ಸಮಂತಾರ ಅತ್ತೆಯಾಗಿ ನಟಿಸಲು 17 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಂದರೆ ಇಡೀ ಚಿತ್ರತಂಡದ ನಟ-ನಟಿಯರಿಗಿಂತ ಹೆಚ್ಚು ಸಂಭಾವನೆ ಇವರಿಗೆ ಇದೆ ಎನ್ನಲಾಗುತ್ತಿದೆ.

ಖಳನಾಯಕನಾದ ಗುಲ್ಶನ್​ ದೇವಯ್ಯ

ಎಲೆಮರೆ ಕಾಯಿಯಂತೆ ಇದ್ದ ಗುಲ್ಶನ್​ ದೇವಯ್ಯ ಅವರು ಹೆಚ್ಚಾಗಿ ಪರಿಚಿತರಾಗಿದ್ದು ಕಾಂತಾರ2 ಸಿನಿಮಾ ಮೂಲಕ. ಸಿನಿಮಾದಲ್ಲಿ ಖಳನಾಯಕನಾಗಿ ಗುರುತಿಸಿಕೊಂಡಿರುವ ಇವರು ಇದಕ್ಕಾಗಿ ಸಂಭಾವನೆ ಪಡೆದಿರುವುದು 25 ಲಕ್ಷ ಮಾತ್ರ ಎನ್ನಲಾಗಿದೆ.

ನಿರೂಪಕಿ ಶ್ರೀಮುಖಿ ಸಂಭಾವನೆ ಎಷ್ಟು?

ನಿರೂಪಕಿ ಕಮ್​​ ನಟಿಯಾಗಿರುವ ಶ್ರೀ ಮುಖಿ ಅವರು ಸಿನಿಮಾದಲ್ಲಿ ಕಿರಿಯ ಸೊಸೆಯಾಗಿ ಎಂಟ್ರಿ ಕೊಡ್ತಾರೆ. ಈ ಚಿತತ್ರದಲ್ಲಿ ನಟನೆ ಮಾಡಲು ಅವರು ಪಡೆದ ಸಂಭಾವನೆ 25 ರಿಂದ 40 ಲಕ್ಷ ಇರಬಹುದು ಎನ್ನಲಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net