ಸಮಂತಾ ನಟನೆಯ ಬ್ಲಾಕ್​ ಬ್ಲಸ್ಟರ್​ ಸಿನಿಮಾ Maa Inti Bangaaram ಒಟಿಟಿಗೆ ಲಗ್ಗೆ; ಜಿಯೋ ಹಾಟ್​ಸ್ಟಾರ್​ನಲ್ಲಿ ಈ ದಿನ ವೀಕ್ಷಿಸಬಹುದು

Maa Inti Bangaaram OTT release
Maa Inti Bangaaram OTT release
Published on

ಪ್ರಮುಖ ಮುಖ್ಯಾಂಶಗಳು

  • ಜುಲೈ.17ರಂದು ಮಾ ಇಂಟಿ ಬಂಗಾರಂ ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಿಸಬಹುದು.
  • ಜಿಯೋ ಹಾಟ್​ಸ್ಟಾರ್​ನಲ್ಲಿ ಮಾ ಇಂಟಿ ಬಂಗಾರಂ ಸಿನಿಮಾ ರಿಲೀಸ್.
  • ನೂರಕ್ಕೂ ಹೆಚ್ಚು ಕೋಟಿ ಗಳಿಕೆ ಮಾಡಿರುವ ಮಾ ಇಂಟಿ ಬಂಗಾರಂ ಸಿನಿಮಾ.
Maa Inti Bangaaram OTT release: ನಟಿ ಸಮಂತಾ ಹಾಗೂ ಸ್ಯಾಂಡಲ್​ವುಡ್​ ನಟ ದಿಗಂತ್​​ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಮಾ ಇಂಟಿ ಬಂಗಾರಂ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲು ಸಾಧ್ಯವಾಗದೆ ಇದ್ದ ಸಿನಿ ಪ್ರೇಮಿಗಳಿಗೆ ಚಿತ್ರತಂಡ ಗುಡ್​ನ್ಯೂಸ್​​ವೊಂದನ್ನು ಕೊಟ್ಟಿದೆ.

ಜುಲೈ.17ರಂದು ಒಟಿಟಿಯಲ್ಲಿ ರಿಲೀಸ್

ಹೌದು, ರಾಜ್ ನಿಡಿಮೋರು ರಚಿಸಿದ ಕತೆ, ಹೋ ಬೇಬಿ ಖ್ಯಾತಿಯ ನಂದಿನಿ ರೆಡ್ಡಿ ನಿರ್ದೇಶನದ ಮಾ ಇಂಟಿ ಬಂಗಾರಂ ಸಿನಿಮಾವು ಜೂನ್ 19, 2026 ರಂದು ವಿಶ್ವದಾದ್ಯಂತ ಭರ್ಜರಿಯಾಗಿ ಯಶಸ್ಸು ಕಂಡಿದೆ. ಸದ್ಯ ಬಾಕ್ಸ್​​ ಆಫೀಸಿನಲ್ಲಿ 100 ಕೋಟಿಗೂ ಹೆಚ್ಚು ಹಣವನ್ನು ಗಳಿಕೆ ಮಾಡಿಕೊಂಡಿರುವ ಈ ಸಿನಿಮಾ ಜಿಯೋ ಹಾಟ್​ಸ್ಟಾರ್​​ನಲ್ಲಿ ಅಬ್ಬರಿಸಲು ರೆಡಿಯಾಗಿದೆ. ಇದೇ ವಾರ ಅಂದರೆ ಜುಲೈ.17ರಂದು ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.

ಯಾವ್ಯಾವ ಭಾಷೆಯಲ್ಲಿ ನೋಡಲು ಲಭ್ಯ?

ಮಾ ಇಂಟಿ ಬಂಗಾರಂ ಸಿನಿಮಾ ಸದ್ಯ ತೆಲುಗು ಆವೃತ್ತಿಯಲ್ಲಿ ಮಾತ್ರ ನೋಡಲು ಲಭ್ಯವಿರಲಿದೆ. ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಡಬ್ ಮಾಡಲಾದ ಆವೃತ್ತಿಗಳ ಬಿಡುಗಡೆ ಬಗ್ಗೆ ಇನ್ನೂ ಯಾವುದೇ ಮಾಹಿತಿಯು ಬಹಿರಂಗವಾಗಿಲ್ಲ ಎನ್ನಲಾಗಿದೆ.

ಮಾ ಇಂಟಿ ಬಂಗಾರಂ ಬಗ್ಗೆ

ಸಮಂತಾ ರುತ್​ ಪ್ರಭು, ಗುಲ್ಶನ್ ದೇವಯ್ಯ, ದಿಗಂತ್ ಮಂಚಾಲೆ, ಗೌತಮಿ, ಶ್ರೀಮುಖಿ ಮತ್ತು ಆನಂದ್ ನಟಿಸಿರುವ ಈ ಸಿನಿಮಾವು ಒಂದು ಆಕ್ಶನ್​, ಕಾಮಿಡಿ ಸಿನಿಮಾವಾಗಿದೆ. ಸಾಂಪ್ರಾದಾಯಿಲ ಆಚರನೆ, ಸಂಸ್ಕೃತಿಯುಳ್ಳ ಮನೆತನದ ಸೊಸೆಯಾಗಿ ಕಾಲಿಡುವ ಸ್ವರ್ಣ(ಸಮಂತಾ) ಹೇಗೆ ಹೊಂದಿಕೊಳ್ಳುತ್ತಾಳೆ. ತನ್ನ ಹಿಂದಿನ ಕತೆಯನ್ನು ಮುಚ್ಚಿಟ್ಟು, ಈಗಿರುವ ಕುಟುಂಬದ ರಕ್ಷಣೆಗಾಗಿ ಹೇಗೆಲ್ಲ ಹೋರಾಡುತ್ತಾಳೆ ಎನ್ನುವುದೇ ಕತೆಯ ಹಂದರವಾಗಿದೆ. ಈ ಸಿನಿಮಾವು 35 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಸದ್ಯ ಜಗತ್ತಿನಾದ್ಯಂತ ಹಿಟ್ ಕಂಡು 100 ಕೋಟಿಗೂ ಅಧಿಕ ಹಣ ಬಾಚಿಕೊಂಡಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net