ಲಾಕ್​ಡೌನ್ ಸಿನಿಮಾ ಪ್ಯಾರಾಸೈಟ್ ಪಸಂದಾಗೈತೆ

page 10 1
Published on

ಬೆಂಗಳೂರು: ಲಾಕ್​ಡೌನ್ ನೆಪದಲ್ಲಿ ಎಲ್ಲರೂ ಮನೆಯಲ್ಲೇ ಬಂಧಿಯಾಗಿದ್ದಾರೆ. ಅಡುಗೆ, ಓದು, ಸಿನಿಮಾ ವೀಕ್ಷಣೆಯಲ್ಲಿ ಕೆಲವರು ಕಾಲ ಕಳೆಯುತ್ತಿದ್ದಾರೆ. ಅದೇ ರೀತಿ ಸಿನಿಮಾ ತಾರೆಯರಿಗೂ ಹೊಸ ಹೊಸ ಸಿನಿಮಾ ನೋಡುವ ಆಸೆ. ಹಾಗಾಗಿ ಈ ಲಾಕ್​ಡೌನ್ ಅವಧಿಯಲ್ಲಿ ನಟ ಶರಣ್ ನೋಡಿದ ಸಿನಿಮಾಗಳ್ಯಾವವು? ಯಾಕೆ ಆ ಸಿನಿಮಾ ನೋಡಬೇಕೆನಿಸಿತು? ಮತ್ತು ಓದುಗರಿಗೂ ನೋಡಲೇಬೇಕಾದ ಸಿನಿಮಾ ಇದು ಎಂದು ಸಜೆಸ್ಟ್ ಮಾಡಿದ್ದಾರೆ.

ಓವರ್ ಟು ಶರಣ್...

ಎಷ್ಟೋ ಸಿನಿಮಾ ನೋಡಬೇಕು ಅಂದುಕೊಂಡಿರುತ್ತೇನೆ. ಆದರೆ, ಕಾರಣಾಂತರ ಗಳಿಂದ ಅವು ಮಿಸ್ ಆಗುತ್ತವೆ. ಆದರೆ, ಇದೀಗ ಲಾಕ್​ಡೌನ್ ನೆಪದಲ್ಲಿ ಸಿನಿಮಾ ನೋಡುವುದನ್ನೇ ಕೆಲಸ ಮಾಡಿಕೊಂಡಿದ್ದೇನೆ. ಆ ಪೈಕಿ ನಾನು ಕೊರಿಯಾದ ‘ಪ್ಯಾರಾಸೈಟ್’ ಚಿತ್ರವನ್ನು ಓದುಗರಿಗೆ ನೋಡುವಂತೆ ಸಜೆಸ್ಟ್ ಮಾಡುತ್ತೇನೆ. ಸಿಂಪಲ್ ಕಥೆ ಮತ್ತು ಅದನ್ನು ಹೆಣೆದಿರುವ ರೀತಿ ನಿಜಕ್ಕೂ ಕೌತುಕ ಹುಟ್ಟಿಸುತ್ತದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ ಆಗಿರುವುದರಿಂದ ಎಲ್ಲಿಯೂ ಬೋರ್ ಆಗುವುದಿಲ್ಲ. ಇತ್ತೀಚೆಗಷ್ಟೇ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯೂ ಈ ಸಿನಿಮಾ ಭಾಜನವಾಗಿದೆ. ಇದನ್ನು ಹೊರತು ಪಡಿಸಿದರೆ, ಕನ್ನಡದ ‘ಲವ್ ಮಾಕ್​ಟೇಲ್’ ಸಿನಿಮಾ ಸಹ ನನ್ನನ್ನು ಸೆಳೆಯಿತು. ಕೃಷ್ಣ ಅವರ ನಿರ್ದೇಶನ ಅಚ್ಚುಕಟ್ಟಾಗಿದೆ. ಪ್ರತಿಯೊಬ್ಬರ ನಟನೆಯೂ ಮನಸಿಗೆ ಹತ್ತಿರವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net