ಲಾಕ್​ಡೌನ್​ ಸಿನಿಮಾ: ಪೋಖ್ರಾನ್ ಗೌಪ್ಯತೆ

page 10 4
Published on

ಬೆಂಗಳೂರು: ಲಾಕ್​ಡೌನ್ ಅವಧಿಯಲ್ಲಿ ‘ಪರಮಾಣು - ದಿ ಸ್ಟೋರಿ ಆಫ್ ಪೋಖ್ರಾನ್’ ಚಿತ್ರವನ್ನು ನೋಡುವ ಅವಕಾಶವಾಯಿತು. 2018ರಲ್ಲಿ ಬಿಡುಗಡೆಯಾದ, ಅಭಿಷೇಕ ಶರ್ಮಾ ನಿರ್ದೇಶನದ, ಜಾನ್ ಅಬ್ರಹಾಂ ನಟನೆಯ ಈ ಚಿತ್ರ, ದೇಶದ ಪರಮಾಣು ಸ್ಪೋಟದ ಯಶಸ್ವಿ ಕಥೆಯನ್ನು ಹೊಂದಿದೆ. ‘ಆಪರೇಷನ್ ಶಾಂತಿ’ ಹೆಸರಿನಲ್ಲಿ, 1998ರಲ್ಲಿ ಸ್ಪೋಟಿಸಿದ ದೇಶದ ಎರಡನೆ ಪರಮಾಣು ಯೋಜನೆಯ ಘಟನೆಯನ್ನು ಆಧರಿಸಿದ ಚಲನಚಿತ್ರ ಇದು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗದ ಹಾಗೆ ಗೌಪ್ಯತೆ ಕಾಪಾಡಿಕೊಂಡು, ಕ್ಷಣಕ್ಷಣಕ್ಕೂ ಎದುರಾಗುವ ಅಡೆ ತಡೆಗಳನ್ನು ನಿವಾರಿಸಿಕೊಂಡು, ಅಮೆರಿಕಾದ ಉಪಗ್ರಹಗಳ ಹದ್ದಿನ ಕಣ್ಣು ತಪ್ಪಿಸಿ ... ಈ ಪ್ರಯೋಗ ಮಾಡಿದ್ದನ್ನು ಅತ್ಯಂತ ರೋಚಕವಾಗಿ ನಿರೂಪಿಸಲಾಗಿದೆ. ದೇಶಾಭಿಮಾನ ಮತ್ತು ರಾಷ್ಟ್ರದ ಗೌರವವನ್ನು ಹೆಚ್ಚಿಸಿದ ಘಟನೆಯನ್ನಾಧರಿಸಿದ ಈ ಚಿತ್ರವನ್ನು ಎಲ್ಲರೂ ನೋಡಲೇಬೇಕು ಎಂಬುದು ನನ್ನ ಆಶಯ.

| ಪ್ರೊಫೆಸರ್ ರಮೇಶ್ ಕುಲಕರ್ಣಿ ಇಳಕಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net