ಲಾಕ್​ಡೌನ್​ ಸಿನಿಮಾ

page 10 2
Published on

ವೈದೇಹಿ ಅವರ ಮೂರು ಕಥೆಗಳ ಆಧಾರಿತ, ಚಂಪಾ ಶೆಟ್ಟಿ ನಿರ್ದೇಶನದ ‘ಅಮ್ಮಚ್ಚಿ ಎಂಬ ನೆನಪು’ ಇತ್ತೀಚೆಗೆ ಅಮೇಜಾನ್ ಪ್ರೖೆಮ್ಲ್ಲಿ ಬಿಡುಗಡೆಯಾಗಿದೆ. ಕಣ್ಣಿಗೆ ತಂಪು ನೀಡುವ ಛಾಯಾಗ್ರಹಣ, ಕಲಾವಿದರ ಅಭಿನಯ ಮತ್ತು ಕುಂದಾಪುರ ಭಾಷೆಯ ಸೊಗಡು ಇಷ್ಟವಾಗುತ್ತದೆ. ಎಲ್ಲರೂ ನೋಡಲೇಬೇಕಾದ ವಿಶಿಷ್ಟ ಚಿತ್ರ ‘ಅಮ್ಮಚ್ಚಿ ಎಂಬ ನೆನಪು’.

| ಮಂಜುಳ ಪ್ರಸಾದ್

‘ರಾಮ ರಾಮಾ ರೇ’ ಮೌನದಲ್ಲೇ ಎಲ್ಲವನ್ನೂ ತಿಳಿಸುವ ಚಿತ್ರ. ಕರ್ತವ್ಯ ನಿಷ್ಠೆ, ಪಾಪ ಪ್ರಜ್ಞೆ, ಕಟುಕನಲ್ಲಿಯೂ ಇರುವ ಕರುಣೆ, ಮನೆಯವರಿಂದ ಯುವ ಪ್ರೇಮಿಗಳಿಬ್ಬರ ತೊಳಲಾಟ ... ಹೀಗೆ ಹಲವು ವಿಷಯಗಳನ್ನು ಏಕಕಾಲಕ್ಕೆ ಹೇಳುವ ಈ ಚಿತ್ರದ ಸಾಹಿತ್ಯ, ಸಂಗೀತ, ಛಾಯಾಗ್ರಹಣ ಎಲ್ಲವೂ ಅದ್ಭುತ. ರಾಮಾಯಣದ ಸೀತೆಯ ಅಗ್ನಿ ಪ್ರವೇಶದ ದೃಶ್ಯದಿಂದ ಪ್ರಾರಂಭವಾಗಿ, ಮಹಾಭಾರತದ ಕೃಷ್ಣ-ಅರ್ಜುನರ ನಡುವಿನ ಹಾಡಿನಿಂದ ಮುಕ್ತಾಯವಾಗುವುದು ವಿಶೇಷ.

| ಮನು ದುಮ್ಮಿ ಹೊನ್ನಾಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net