ಪಾತ್ರೆ ತೊಳೆಯುವ ವಿಚಾರಕ್ಕೆ ಕ್ಯಾಪ್ಟನ್​ ಜೊತೆ ವಾಗ್ವಾದ; ತಾಕತ್ತಿದ್ರೆ 3 ದಿನ ಉಪವಾಸ ಇರಿ ಎಂದು ಸ್ಪರ್ಧಿಗಳಿಗೆ ಲಿಖಿತ್ ಸವಾಲ್​..BBK13

ಎಕ್ಸ್​ನಿಂದ ಸಂಗ್ರಹಿಸಿದ ಚಿತ್ರ
ಎಕ್ಸ್​ನಿಂದ ಸಂಗ್ರಹಿಸಿದ ಚಿತ್ರ
Published on
  • ಮನೆಯಲ್ಲಿ ಪಾತ್ರೆಗಳನ್ನು ಸ್ವಚ್ಛವಾಗಿಡದ ವಿಷಯಕ್ಕೆ ಕ್ಯಾಪ್ಟನ್​-ಲಿಖಿತ್​ ನಡುವೆ ತೀವ್ರ ವಾಗ್ವಾದ.

  • ಪಾತ್ರೆಗಳನ್ನು ಸ್ವಚ್ಛಗೊಳಿಸುವಂತೆ ಸೂಚಿಸಿ ಸಂಗೀತಾ ಅವರು ಲಿಖಿತ್​ ಮೇಲೆ ಗರಂ.

  • ನಿಯಮಗಳನ್ನು ಪಾಲಿಸುವ ವಿಚಾರಕ್ಕೆ ಲಿಖಿತ್​ ಜೊತೆ ಸಂಗೀತಾ ಭಟ್ ಜಗಳ .

Bigg Boss Kannada Season 13: ಬಿಗ್​ಬಾಸ್ ಮನೆಯಲ್ಲಿ ಸ್ಪರ್ಧಿಗಳೆಲ್ಲರೂ ಸದ್ಯ ನಾಮಿನೇಟ್ ಆಗಿದ್ದು, ತಮ್ಮನ್ನು ತಾವು ಬಚಾವ್ ಮಾಡಿಕೊಳ್ಳಲು ಶಕ್ತಿ ಮೀರಿ  ಆಟವನ್ನಾಡುತ್ತಿದ್ದಾರೆ. ಸದ್ಯ ರಿಲೀಸ್ ಆದ ಹೊಸ ಪ್ರೊಮೋದಲ್ಲಿ ಊಟದ ವಿಚಾರಕ್ಕೆ  ಗಲಾಟೆ ನಡೆದಿದ್ದು, ಕ್ಯಾಪ್ಟನ್​ ಸಂಗೀತಾ ಭಟ್ ಮತ್ತು ಲಿಖಿತ್​ ಅವರ ನಡುವೆ ಪಾತ್ರೆ ತೊಳೆಯುವ ವಿಚಾರಕ್ಕೆ ನಡೆದ ವಾಗ್ವಾದ ತಾರಕ್ಕೇರಿದೆ.

ನಿನ್ನೇ ಏನಾಗಿತ್ತು? 

 ಬಿಗ್​ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ತೀವ್ರಗೊಳ್ಳುತ್ತಿದ್ದು, ಒಂದರ ಮೇಲೊಂದರಂತೆ ನೀಡಲಾಗುತ್ತಿರುವ ಟ್ವಿಸ್ಟ್‌ಗಳಿಂದ ಸ್ಪರ್ಧಿಗಳಲ್ಲಿ ಎಲಿಮಿನೇಷನ್ ಭಯ ಆವರಿಸಿದೆ. ಈ ವಾರ ‘ಎಮರ್ಜೆನ್ಸಿ ಎಕ್ಸಿಟ್​ ಘೋಷಣೆ ಮಾಡಿರುವುದರಿಂದ,  ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸ್ಪರ್ಧಿಗಳು ಹರಸಾಹಸ ಪಡುತ್ತಿದ್ದಾರೆ.ವಾರದ ಮಧ್ಯದ ಎಲಿಮಿನೇಷನ್‌ನಿಂದ (ಮಿಡ್ ವೀಕ್ ಎಲಿಮಿನೇಷನ್) ಪಾರಾಗಲು ಬಿಗ್‌ಬಾಸ್ ಕಡೆಯಿಂದ ವಿಶೇಷ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ ಆಡುವ ಸಮಯದಲ್ಲಿ ಸ್ಪರ್ಧಿಗಳು ಅತಿರೇಕವಾಗಿ ವರ್ತಿಸಿದ್ದು ಗಮನ ಸೆಳೆಯಿತು.  

ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಸ್ಪರ್ಧಿಗಳಿಗೆ ಸುದೀಪ್​ ಅವರು  ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಪ್ರತಿ ವಿಚಾರಕ್ಕೆ ಜಗಳವಾಡುವ ಬಗ್ಗೆ ಕಿಡಿಕಾರಿದ್ದರು. ಆದರೆ, ಸ್ಪರ್ಧಿಗಳು ಮಾತನ್ನು ಮೀರಿ ಮತ್ತೆ ಅಗ್ರೆಸಿವ್ ಆಗಿ ವರ್ತಿಸುತ್ತಿದ್ದಾರೆ. ಇಂದು ರಿಲೀಸ್ ಆದ ಪ್ರೋಮೋದಲ್ಲಿ   ಲಿಖಿತ್​ ಅವರು  ಸಂಗೀತಾ ಭಟ್ ಅವರೊಂದಿಗೆ ಕಿತ್ತಾಡಿಕೊಂಡಿರುವುದು ಕಂಡು ಬಂದಿದೆ. ಅಡುಗೆ ಮನೆ ಮತ್ತು ಊಟದ ಬಳಿಕ ಪಾತ್ರೆಗಳನ್ನು ಎಲ್ಲೆಂದರಲ್ಲಿ ಬಿಟ್ಟಿರುವುದು ಮತ್ತು ಅವುಗಳನ್ನು ಸ್ವಚ್ಛಗೊಳಿಸುವ ವಿಚಾರದಲ್ಲಿ ದೊಡ್ಡ ಗಲಾಟೆ ನಡೆದಿದೆ.ಸ್ಪರ್ಧಿ ಸಂಗೀತಾ ಅವರು ಮನೆಯಲ್ಲಿ ಕೆಲಸದ ಜವಾಬ್ದಾರಿ ಹಾಗೂ ಸ್ವಚ್ಛತೆಯ ನಿಯಮಗಳ ಬಗ್ಗೆ ಪ್ರಶ್ನಿಸಿ, ಎಲ್ಲರ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಲಿಖಿತ್​ ಪಾತ್ರೆ ವಾಶ್ ಮಾಡಿ, ಅವ್ರು ತಿಂಡಿ ಮಾಡುತ್ತಾರೆ ಇದು ನನ್ನ ಆಜ್ಞೆ ಎಂದು ಸಂಗೀತಾ ಭಟ್ ಅವರು ಹೇಳುತ್ತಾರೆ. ಆಗ ಲಿಖಿತ್​ ನಾನು ವಾಶ್ ಮಾಡೋದಿಲ್ಲ. ಇಲ್ಲಿ ಪಾತ್ರೆ ತೊಳಿಯೋಕೆ ಬಂದಿಲ್ಲ ಎನ್ನುತ್ತಾರೆ. ನೀವು ನನ್ನ ಮೇಲೆ ಪರ್ಸನಲ್​ ಅಟ್ಯಾಕ್ ಮಾಡುತ್ತಿದ್ದೀರಾ ಎಂದು ಕಿಡಿಕಾರುತ್ತಾರೆ.

ಮೂರು ದಿನ ಉಪವಾಸ ಇರಿ

 ಹಸವಾಗ್ತಿದೆ ಒಬ್ರಿಗೆ ಪನಿಶ್​ಮೆಂಟ್​ ಕೊಡಿ ಎಲ್ಲರಿಗೂ ಯಾಕೆ ಎಂದು ಸ್ಪರ್ಧಿಗಳು ಪ್ರಶ್ನೆ ಮಾಡಿದ್ದಾರೆ. ಆಗ 'ಲಿಖಿತ್​ ಅವರು ನಾನು ಕ್ಲೀನ್​ ಮಾಡುವವರೆಗೂ ಯಾರು ತಿನ್ನುವ ಹಾಗಿಲ್ಲ. ನಾನು ಮೂರು ದಿನ ಉಪವಾಸ ಇರುತ್ತೇನೆ  ಇರಿ ನೀವೆಲ್ಲ' ಎಂದು ಲಿಖಿತ್​ ಸವಾಲ್​ ಹಾಕುತ್ತಾರೆ. ಲಿಖಿತ್ ಅವರ ಈ ವರ್ತನೆ ಮತ್ತು ಮೊಂಡಾಟದಿಂದಾಗಿ ಇಡೀ ಮನೆಯವರಿಗೆಲ್ಲ ತೊಂದರೆಯಾಗಿದ್ದು, ಎಲ್ಲರಿಗೂ ಶಿಕ್ಷೆ ಅನುಭವಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.  ಏನಾಗುತ್ತದೆ? ಲಿಖಿತ್ ಪಾತ್ರೆ ವಾಶ್ ಮಾಡುತ್ತಾರೋ ಇಲ್ಲವೋ ಎನ್ನುವುದನ್ನು ಇಂದಿನ ಎಪಿಸೋಡ್​ನಲ್ಲಿ ನೋಡಬೇಕಾಗಿದೆ, (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net