ಚಾಲೆಂಜ್ ಮಾಡುವ ಬದಲು ಕೆಲಸ ಮಾಡಿ

page 10 1
Published on

ಬೆಂಗಳೂರು: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಅವಶ್ಯಕ ಸಾಮಗ್ರಿಗಳ ಕೊರತೆ ಎದುರಾಗಿದೆ. ಆ ಕೊರತೆಯನ್ನು ನೀಗಿಸಲು ಸರ್ಕಾರಗಳು ಅವಿರತವಾಗಿ ಶ್ರಮವಹಿಸು ತ್ತಿವೆ. ಈ ನಡುವೆ ಉಳ್ಳವರು ಕೈಲಾದ ಮಟ್ಟಿಗೆ ಬಡವರ ಕೂಗಿಗೆ ಕಿವಿಗೊಡುತ್ತಿದ್ದಾರೆ. ಊಟ, ತಿಂಡಿ, ದವಸ ಧಾನ್ಯ ವಿತರಿಸುತ್ತಿದ್ದಾರೆ. ಅದರಲ್ಲೂ ಸಿನಿಮಾ ಮಂದಿ ಅದನ್ನೇ ಒಂದು ಕಾಯಕ ಎಂಬಂತೆ ರಸ್ತೆಗಿಳಿದು ಮನೆ ಮನೆಗೆ ತೆರಳಿ ಅವಶ್ಯಕ ಸಾಮಗ್ರಿಗಳನ್ನು ಹಂಚುತ್ತಿದ್ದಾರೆ. ಅದೇ ರೀತಿ ನಟಿ ಕಾರುಣ್ಯಾ ರಾಮ್ ಸಹ ದಿನಸಿ ಪದಾರ್ಥಗಳನ್ನು ವಿತರಣೆ ಮಾಡುತ್ತಿದ್ದಾರೆ.

ಈಗಾಗಲೇ 100ಕ್ಕೂ ಅಧಿಕ ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು ಹಂಚಿಕೆ ಮಾಡಿದ್ದಾರೆ. ಕಾರುಣ್ಯಾ ಸದ್ಯ ರಾಜರಾಜೇಶ್ವರಿ ನಗರದಲ್ಲಿದ್ದಾರೆ. ಅವರ ಮನೆಯ ಸುತ್ತಮುತ್ತಲಿನ ಮನೆಗಳಿಗೆ ತೆರಳಿ 10 ಕೆಜಿ ಅಕ್ಕಿ, ಒಂದು ಕೆಜಿ ಬೇಳೆ, ಒಂದು ಕೆಜಿ ಎಣ್ಣೆ, ಒಂದು ಕೆಜಿ ಸಕ್ಕರೆ, ಉಪು್ಪ, ಸೋಪನ್ನು ವಿತರಿಸಿದ್ದಾರೆ. ಕಳೆದ ಒಂದು ವಾರದಿಂದ ಈ ಕೆಲಸ ಶುರುವಾಗಿದ್ದು, ಮುಂದಿನ ಒಂದು ವಾರ ಮತ್ತೊಂದಿಷ್ಟು ಮನೆಗಳನ್ನು ಗುರುತಿಸಿ ನೀಡುವ ಪ್ಲಾ್ಯನ್ ಹಾಕಿದ್ದಾರೆ.

‘ಈಗಾಗಲೇ ರೇಷನ್ ನೀಡುವ ಕೆಲಸ ಶುರುವಾಗಿದೆ. ಕಳೆದೊಂದು ವಾರದಿಂದ 100 ಕುಟುಂಬಗಳಿಗೆ ಸಾಕಾಗುವಷ್ಟು ದಿನಸಿ ಪದಾರ್ಥವನ್ನು ನೀಡಿದ್ದೇನೆ. ಈಗಾಗಲೇ ರೇಷನ್ ಖಾಲಿಯಾಗಿದ್ದು, ಇನ್ನೂ 100 ಕುಟುಂಬಗಳಿಗೆ ಸಾಕಾಗುವಷ್ಟು ದಿನಸಿ ತರಿಸಿದ್ದೇನೆ. ಇನ್ನೇನಿದ್ದರೂ ಅದರ ಹಂಚಿಕೆ ಮಾಡಬೇಕು’ ಎಂಬುದು ಕಾರುಣ್ಯಾ ಮಾತು. ಅಂದಹಾಗೆ, ಲಾಕ್​ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಕಾರುಣ್ಯಾ, ಕ್ರಾಫ್ಟ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಸಣ್ಣಪುಟ್ಟ ಬಗೆಬಗೆ ವಿನ್ಯಾಸದ ಕರಕುಶಲ ವಸ್ತುಗಳನ್ನು ಮಾಡುತ್ತ ಕಾಲಕಳೆಯುತ್ತಿದ್ದಾರಂತೆ.

05

ನಾನು ಜಾಲತಾಣದಲ್ಲಿ ಅವಶ್ಯಕ ವಸ್ತುಗಳನ್ನು ನೀಡಿದ್ದನ್ನು ಹಂಚಿಕೊಂಡಿದ್ದು, ಬೇರೆಯವರು ಆ ಕೆಲಸಕ್ಕೆ ಸಜ್ಜಾಗಲಿ ಎಂದು. ಕೊಡುವಿಕೆಯ ಆ ಸರಪಳಿ ಮತ್ತಷ್ಟು ದೊಡ್ಡದಾಗಲಿ. ಇತರರಿಗೆ ಸ್ಪೂರ್ತಿಯಾಗಲಿ ಎಂದು. ಸಾರಿ ಚಾಲೆಂಜ್, ಐಸ್ ಬಕೆಟ್ ಚಾಲೆಂಜ್ ಮಾಡುವ ಬದಲು ಈ ರೀತಿಯ ಕೆಲಸದಲ್ಲಿ ತೊಡಗಿಸಿಕೊಳ್ಳಲಿ ಎಂಬುದು ನನ್ನ ಕೋರಿಕೆ . | ಕಾರುಣ್ಯಾ ರಾಮ್ ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net