ಸಂಸ್ಕೃತಿ ಬಗ್ಗೆ ಹೆಮ್ಮೆ ಇರಲಿ; ಧರ್ಮ ಅವಹೇಳನ ಮಾಡುವವರಿಗೆ ಪ್ರಣೀತಾ ಕ್ಲಾಸ್

Praneetha
Published on

ಸ್ಯಾಂಡಲ್​ವುಡ್ ನಟಿ ಪ್ರಣೀತಾ ಸುಭಾಷ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಭಾರತ, ಹಿಂದೂ ಧರ್ಮದ ಅವಹೇಳನ ಮಾಡುವವರಿಗೆ ತಮ್ಮದೇ ರೀತಿಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

‘ಇವತ್ತು ಹಲವರಲ್ಲಿ ನಮ್ಮ ದೇಶ, ಆಚಾರ ವಿಚಾರಗಳನ್ನು ಅಪಹಾಸ್ಯ ಮಾಡುವ ಮನೋಭಾವ ಹೆಚ್ಚಿದೆ. ನಾವು ನಮ್ಮ ದೇಶದ ಬಗ್ಗೆ, ನಮ್ಮ ಆಚರಣೆ, ಸಂಸ್ಕೃತಿ, ಇತಿಹಾಸದ ಬಗ್ಗೆ ಹೆಮ್ಮೆ ಪಡಬೇಕು. ನಾವು ನಮ್ಮ ಧರ್ಮದ ಪರ ನಿಲ್ಲದಿದ್ದರೆ, ಬೇರೆಯವರು ಬಂದು ನಿಲ್ಲುವುದಿಲ ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಪ್ರಣೀತಾ.

ಪ್ರಣೀತಾ ಸದ್ಯ ಸ್ವರ್ಗಕ್ಕೆ ಮೂರೇ ಗೇಣು ಎಂಬಷ್ಟು ಖುಷಿಯಲ್ಲಿದ್ದಾರೆ. ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳಲು ಸಂಭ್ರಮದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ‘ನನಗೆ, ನನ್ನ ಪತಿಗೆ ಮಾತ್ರವಲ್ಲ ನಮ್ಮ ಮನೆಯ ಎಲ್ಲರಿಗೂ ಹೆಣ್ಣಮಗು ಅಂದರೆ ಇಷ್ಟ. ಹೀಗಾಗಿ ಹೆಣ್ಣುಮಗು ಆಗುತ್ತೆ ಎಂಬ ನಿರೀಕ್ಷೆಯಿದೆ. ಇನ್ನು ಗರ್ಭಾವಸ್ಥೆಯ ಸಮಯದಲ್ಲಿ ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ನಾನು ಸಸ್ಯಾಹಾರಿ. ನಾನ್-ವೆಜ್ ತಿನ್ನುವುದಿಲ್ಲ. ಆರೋಗ್ಯಕರ ಆಹಾರ ಸೇವಿಸುತ್ತೇನೆ. ಆಗಾಗ ಪ್ರೊಟೀನ್ ತೆಗೆದುಕೊಳ್ಳುತ್ತೇನೆ. ಅಮ್ಮನೇ ಸ್ತ್ರೀರೋಗತಜ್ಞರಾದ ಕಾರಣ ಅವರೇ ಗೈಡ್ ಮಾಡುತ್ತಾರೆ’ ಎಂದು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿರುವ ಬಗ್ಗೆ ಹೇಳಿಕೊಳ್ಳುತ್ತಾರೆ ಪ್ರಣೀತಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net