ತೆರೆಮರೆಯ ಸೇವೆಯಲ್ಲಿ ಲೇಪನಾ ನಾಗರಾಜ್; ಬೆಡ್, ಆಕ್ಸಿಜನ್, ರೆಮ್​ಡೆಸಿವಿರ್ ಪೂರೈಕೆ

IMG-20210518-WA0037
Published on

ಬೆಂಗಳೂರು: ಕರೊನಾ ಕಷ್ಟಕಾಲದಲ್ಲಿ ಹಲವು ಸೆಲೆಬ್ರಿಟಿಗಳು ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ ಮಾಡೆಲಿಂಗ್, ಜಾಹೀರಾತು ಕ್ಷೇತ್ರ ಮತ್ತು ಸಿನಿಮಾದಲ್ಲಿ ಗುರುತಿಸಿಕೊಂಡಿರುವ ನಟಿ ಲೇಪನಾ ನಾಗರಾಜ್ ತೆರೆಮರೆಯಲ್ಲಿಯೇ ಸೇವೆಯಲ್ಲಿ ನಿರತರಾಗಿದ್ದಾರೆ. ಮನೆಯಲ್ಲಿದ್ದುಕೊಂಡೇ 150ಕ್ಕೂ ಅಧಿಕ ಜನರಿಗೆ ಬೆಡ್ ವ್ಯವಸ್ಥೆ, ಆಕ್ಸಿಜನ್, ರೆಮ್​ಡೆಸಿವಿರ್​ ಇಂಜೆಕ್ಷನ್ ತಲುಪಿಸುತ್ತಿದ್ದಾರೆ. ‘ಕೋವಿಡ್​ನಿಂದ ನಮ್ಮ ಸಂಬಂಧಿಕರೇ ತೀರಿಹೋದರು. ಆ ನೋವು ತುಂಬ ಘಾಸಿ ಮಾಡಿತ್ತು. ಜನರ ಸ್ಥಿತಿ ಹೀಗಿರುವಾಗ ಏನಾದರೂ ಮಾಡಬೇಕೆಂದಾಗ ಈ ಐಡಿಯಾ ಹೊಳೆಯಿತು.

ನನ್ನ ಸೋಷಿಯಲ್ ಮೀಡಿಯಾ ಖಾತೆಯಿಂದಲೇ ಕೆಲಸ ಶುರು ಮಾಡಿದೆ. ಪರಿಚಯಸ್ಥ ವೈದ್ಯರ ನೆರವೂ ಪಡೆದುಕೊಂಡು, ಆಸ್ಪತ್ರೆ ಯಲ್ಲಿ ಬೆಡ್ ಸಿಗದವರಿಗೆ ಬೆಡ್, ಆಕ್ಸಿಜನ್, ರೆಮ್​ಡೆಸಿವಿರ್​ ಅವಶ್ಯಕತೆ ಇದ್ದವರಿಗೆ ಅದನ್ನೂ ಪೂರೈಸಿದ್ದೇನೆ. ಈವರೆಗೂ 150ಕ್ಕೂ ಅಧಿಕ ಜನರಿಗೆ ಈ ಸೇವೆ ತಲುಪಿದೆ. ಉಳಿದ ಕೆಲಸಕ್ಕೆ ಹೋಲಿಕೆ ಮಾಡಿದರೆ ಇದು ನನ್ನ ಸಣ್ಣ ಕಾರ್ಯವಾದರೂ, ತೃಪ್ತಿ ಇದೆ. ಈ ಕೆಲಸಕ್ಕೆ ಮನೆಯವರೂ ಕೈ ಜೋಡಿಸಿದ್ದಾರೆ. ಮುಂದೆಯೂ ಈ ಸೇವೆ ಹೀಗೆ ನಡೆಯಲಿದೆ’ ಎನ್ನುತ್ತಾರೆ ಲೇಪನಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net