ಇದೀಗ, ಹೊಸ ವರ್ಷದ ಹಾಡಿನಲ್ಲಿ ಹಾಟ್ ಹಾಟ್ ಉಡುಪುಗಳು ಧರಿಸಿ ಚೆಂದನ್ ಜತೆ ಹೆಜ್ಜೆ ಹಾಕಿ ರಚಿತಾ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ. ಅದರಲ್ಲೂ, ರಚ್ಚು ಅಭಿಮಾನಿಗಳಿಗೆ ಈ ಹಾಡು ಕಿಕ್ ಮೇಲೆ ಕಿಕ್ ನೀಡುತ್ತಿದೆ. ಟಕೀಲ, ಬ್ಯಾಡ್ಬಾಯ್, ತ್ರಿಪೇಗ್ ಎಂದು ಈ ಹಾಡು, ಹೊಸ ವರ್ಷಕ್ಕೆ ಹುಚ್ಚೆದ್ದು ಕುಣಿಯಬೇಕು ಎಂಬ ಯುವಕ-ಯುವತಿಯರ ಮನಸ್ಸು ಗೆದ್ದಿದ್ದು, ಯೂಟ್ಯೂಬ್ನಲ್ಲಿ ಬಿಡುಗಡೆಯಾದ 18 ಗಂಟೆಗಳಲ್ಲಿ 2 ಮಿಲಿಯನ್ಗೂ ಹೆಚ್ಚು ವೀಕ್ಷಣೆಗಳನ್ನು ಗಿಟ್ಟಿಸಿಕೊಂಡು, ಟ್ರೆಂಡಿಂಗ್ನಲ್ಲಿದೆ. ಸದ್ಯ, ಮ್ಯೂಸಿಕ್ ವಿಭಾಗದಲ್ಲಿ ಈ ''ಲಕ ಲಕ ಲ್ಯಾಂಬೋರ್ಗಿನಿ'' ಹಾಡು ನಂಬರ್ 1 ಸ್ಥಾನದಲ್ಲಿದೆ. ಕಳೆದ 4 ವರ್ಷಗಳಿಂದ ಚಂದನ್ ಶೆಟ್ಟಿ ಹೊಸ ವರ್ಷಕ್ಕೆ ಅಂತ ನಾಲ್ಕು ಹಾಡುಗಳು ಬಿಡುಗಡೆ ಮಾಡಿದ್ದು, ಆ ನಾಲ್ಕು ಹಾಡುಗಳು ಸೂಪರ್ ಹಿಟ್ ಆಗಿವೆ. ಇನ್ನು, ''ಲಕ ಲಕ ಲ್ಯಾಂಬೋರ್ಗಿನಿ'' ಹಾಡಿನ ಭಾಗ-2 ಸಹ ಬರಲಿದೆಯಂತೆ. ಆ ಹಾಡಿನಲ್ಲಿ ನಿಜವಾದ ಲ್ಯಾಂಬೋರ್ಗಿನಿ ಕಾರು ಬಳಸಿ ವಿದೇಶದಲ್ಲಿ ಶೂಟ್ ಮಾಡಲಾಗುತ್ತೆ ಎಂದು ಹೇಳಲಾಗುತ್ತಿದೆ.