ಕಲರ್ಸ್ ಕನ್ನಡದಲ್ಲಿ ಲಗ್ನಪತ್ರಿಕೆ

Lagna
Published on

ಬೆಂಗಳೂರು: ಮದುವೆಗಳು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತವೆ ಎಂದು ಗೊತ್ತಿದ್ದರೂ ಭೂಲೋಕದಲ್ಲಿ ಮದುವೆಗಳ ಸುತ್ತ ನಡೆಯುವ ಥರಥರದ ನಾಟಕಗಳಿಗೆ ಕೊನೆಯೇ ಇಲ್ಲ. ಅಂಥದ್ದೇ ಒಂದು ಚೆಂದದ ಹೊಸ ಧಾರಾವಾಹಿ ಶುರುವಾಗುತ್ತಿದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ .

ಇದೇ ಸೆ. 21ರ ಸೋಮವಾರದಿಂದ ರಾತ್ರಿ 10ಗಂಟೆಗೆ ಆರಂಭಗೊಳ್ಳುತ್ತಿರುವ ಈ ಹೊಸ ಧಾರಾವಾಹಿಯ ಹೆಸರು ‘ಲಗ್ನಪತ್ರಿಕೆ’. ಈ ಹೊಸ ಧಾರಾವಾಹಿಯ ಹುಡುಗ-ಹುಡುಗಿಯ ಲಗ್ನಪತ್ರಿಕೆ ಈಗಾಗಲೇ ಅಚ್ಚಾಗಿದೆ. ನಿಶ್ಚಿತಾರ್ಥ ನಡೆದರೂ ಮದುವೆ ನಡೆಯುವುದು ನಿಶ್ಚಿತವಿಲ್ಲ. ಏಕೆಂದರೆ ತಮ್ಮ ಮದುವೆಗೆ ಬರಬೇಡಿ ಅಂತ ಖುದ್ದಾಗಿ ವಧು- ವರರೇ ವಿನಂತಿ ಮಾಡುತ್ತಿದ್ದಾರೆ. ಈ ಮದುವೆ ಖಂಡಿತ ನಡೆಯುವುದಿಲ್ಲ ಅನ್ನೊದು ಅವರ ನಂಬಿಕೆ.

ಹಾಗಾದರೆ ಅವರ ಮದುವೆಗೆ ಅಡ್ಡಿ ಮಾಡುತ್ತಿರುವವರು ಯಾರು? ತಮ್ಮದೇ ಲಗ್ನಕ್ಕೆ ವಿಘ್ನ ತರುವುದಕ್ಕೆ ಪ್ರಯತ್ನಿಸುತ್ತಿರುವವರು ಈ ಹುಡುಗ ಹುಡುಗೀನೇ! ಅವರಿಗೆ ಒಬ್ಬರ ಮುಖ ಕಂಡರೆ ಒಬ್ಬರಿಗಾಗುವುದಿಲ್ಲ. ಹಾಗಿದ್ದರೂ ಅವರು ಮದುವೆಗೆ ಒಪ್ಪಿಕೊಂಡದ್ದು ಹೇಗೆ? ನಿಶ್ಚಿತಾರ್ಥ ನಡೆದದ್ದು ಹೇಗೆ? ಈಗ ಈ ಮದುವೆ ತಪ್ಪಿ ಹೋಗುತ್ತಾ? ಇವೆಲ್ಲದರ ನಡುವೆ ನೂರು ಸುಳ್ಳು ಹೇಳಿ ಒಂದು ಮದುವೆ ಮಾಡಿಸೋಕೆ ಹೊರಟಿರುವ ಹುಡುಗಿಯ ತಂದೆ ಮುಚ್ಚಿಟ್ಟಿರುವ ಗುಟ್ಟೇನು? ತಾಳಿಯಲ್ಲಿ ಮೂರು ಗಂಟಿದ್ದರೆ ಈ ಕತೆಯಲ್ಲಿ ನೂರು ಗಂಟುಗಳಿವೆ! ಇವೆಲ್ಲಾ ಗೊತ್ತಾಗಬೇಕಾದರೆ, ನೀವು ಈ ಹೊಸ ಧಾರಾವಾಹಿ ಲಗ್ನಪತ್ರಿಕೆಯನ್ನು ನೋಡಬೇಕು. ಲಗ್ನಪತ್ರಿಕೆಯ ಹುಡುಗಿ ನಿಮ್ಮ ಪಕ್ಕದ್ಮನೆ ಹುಡುಗಿ ಥರಾನೇ ಇದ್ದಾಳೆ. ಅಂದಮೇಲೆ ಮದುವೆನಾ ಮಿಸ್ ಮಾಡೋಕಾಗುತ್ತಾ? ನೆನಪಿಡಿ ಇದೇ ಸೋಮವಾರ. ರಾತ್ರಿ ಹತ್ತು ಗಂಟೆಗೆ ಮುಹೂರ್ತ. ತಪ್ಪದೇ ಬರಬೇಕು! ನಿಮ್ಮ ಆಗಮನವೇ ಉಡುಗೊರೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net