ಆಚಾರ್ ಆಂಡ್ ಕೋ ಸಿನಿಮಾ ನಿರ್ದೇಶಕಿ, ನಟಿ ಸಿಂಧು ಶ್ರೀನಿವಾಸ್ ಮೂರ್ತಿ ಸದ್ಯ ನಾಲ್ಕು ಮಂದಿ ನಿರ್ದೇಶಕರು ಆಕ್ಷನ್ ಕಟ್ ಹೇಳಲು ಸಿದ್ಧವಾಗಿರುವ ನಾಕುತಂತಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸಂಗೀತಾ ಭಟ್, ಖುಷಿ ರವಿ, ರೋಶಿನಿ ಪ್ರಕಾಶ್ ಇದ್ದಾರೆ. ಕಳೆದ ಕೆಲವು ದಿನದ ಹಿಂದೆ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು, ಇದ್ರಲ್ಲಿ ನಾಲ್ವರು ನಟಿಯರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ಈ ಸಿನಿಮಾದಲ್ಲಿ ಸಿಂಧು ಅವರು ಟ್ರಾಫಿಕ್ ಪೊಲೀಸ್ ಆಗಿ ನಟಿಸುತ್ತಿದ್ದು, ಆ ಪಾತ್ರಕ್ಕಾಗಿ ಫೈಟ್ ಸಹ ಮಾಡಿದ್ದರು ಎಂದು ಸಿಂಧು ಶ್ರೀನಿವಾಸ್ ಮೂರ್ತಿ ತಮ್ಮ ಸಂದರ್ಶನದಲ್ಲಿ ಹೇಳಿದ್ದರು.