ಮುಂಬೈ: ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿ, ವೃತ್ತಿಜೀವನದ ಉತ್ತುಂಗದಲ್ಲಿರುವ ನಟಿ ಕೃತಿ ಸನೋನ್ (Kriti Sanon). ಮಿಮಿ, ಕ್ರೂ, ಕಾಕ್‌ಟೇಲ್ 2, ಬರೇಲಿ ಕಿ ಬರ್ಫಿ ಮತ್ತು ಲುಕಾ ಚುಪ್ಪಿಯಂತಹ ಸ್ಮರಣೀಯ ಚಿತ್ರಗಳ ಮೂಲಕ ಕೋಟ್ಯಂತರ ಪ್ರೇಕ್ಷಕರ ಮನಗೆದ್ದಿರುವ ಈ ಯಶಸ್ವಿ ತಾರೆ, ಇತ್ತೀಚೆಗೆ ಮಹಿಳೆಯರ ವೈಯಕ್ತಿಕ ಆಯ್ಕೆ ಮತ್ತು ಸಾಮಾಜಿಕ ಒತ್ತಡಗಳ ಕುರಿತು ಅತ್ಯಂತ ಧೈರ್ಯದ ನಿರ್ಧಾರವೊಂದನ್ನು ಬಹಿರಂಗಪಡಿಸಿದ್ದಾರೆ.