ಪವನ್​ ಕಲ್ಯಾಣ್​ ಚಿತ್ರದಲ್ಲಿ ಕೃತಿ

Krithi
Published on

ಸೋಷಿಯಲ್​ ಮೀಡಿಯಾದಿಂದಾಗಿ ರಾತ್ರೋ ರಾತ್ರಿ ಸ್ಟಾರ್​ ಪಟ್ಟ ಗಿಟ್ಟಿಸಿಕೊಂಡು, ಕಿರು ಅವಧಿಯಲ್ಲಿಯೇ ರಾಷ್ಟ್ರವ್ಯಾಪಿ ಸೆನ್ಸೆಷನ್​ ಸೃಷ್ಟಿಸಿದ್ದ ನಟಿ ಕೃತಿ ಶೆಟ್ಟಿ ಟಾಲಿವುಡ್​ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.

ಸ್ಟಾರ್​ ನಟರ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳು ತ್ತಿದ್ದಾರೆ. ಇದೀಗ ಪವನ್​ ಕಲ್ಯಾಣ್​ ಚಿತ್ರದಲ್ಲಿಯೂ ಕೃತಿ ಪ್ರಮುಖ ಪಾತ್ರವೊಂದನ್ನು ಮಾಡಲಿದ್ದಾರಂತೆ. ಹರೀಶ್​ ಶಂಕರ್​ ನಿರ್ದೇಶನದಲ್ಲಿ ಪವನ್​ ಕಲ್ಯಾಣ್​ ಸಿನಿಮಾ ಮಾಡುತ್ತಿರುವುದು ಈಗಾಗಲೇ ಗೊತ್ತಿರುವ ವಿಚಾರ. ಇದೀಗ ಈ ಬಳಗಕ್ಕೆ ಕೃತಿ ಆಗಮನವಾಗಿದೆ. ಹಾಗಾದರೆ, ಇಲ್ಲಿ ಪವನ್​ಗೆ ಕೃತಿ ನಾಯಕಿಯೇ? ಇಲ್ಲ. ಚಿತ್ರದಲ್ಲಿ ಪವನ್​ ಕಲ್ಯಾಣ್​ ಅಣ್ಣನ ಮಗಳ ಪಾತ್ರದಲ್ಲಿ ಕೃತಿ ಪಾತ್ರ ಸಾಗಲಿದೆಯಂತೆ.

"ವಕೀಲ್​ ಸಾಬ್​' ಬಳಿಕ ಶ್ರುತಿ ಹಾಸನ್​ ಇಲ್ಲಿಯೂ ನಾಯಕಿ ಎಂಬ ಮಾತು ಕೇಳಿಬರುತ್ತಿವೆ. ಕೃತಿ ಮೂಲತ@ ಮಂಗಳೂರಿನವರು. ವಯಸ್ಸು ಈಗಿನ್ನು 17. 2019ರಲ್ಲಿ ಬಾಲಿವುಡ್​ನಲ್ಲಿ ಹೃತಿಕ್​ ರೋಷನ್​ ನಟನೆಯ "ಸೂಪರ್​ 30' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದ ಈ ಚೆಲುವೆ, "ಉಪ್ಪೆನಾ' ಚಿತ್ರದ ಮೂಲಕ ತೆಲುಗಿನಲ್ಲಿಯೂ ಸಿನಿಮಾ ಮಾಡಿದರು. ಕಳೆದ ೆಬ್ರವರಿ 12ಕ್ಕೆ ತೆರೆಕಂಡಿದ್ದ ಈ ಸಿನಿಮಾ, 75 ಕೋಟಿ ರೂ. ಕಲೆಕ್ಷನ್​ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net