ಅಂದಹಾಗೆ, ಕೈತಿ ಶೆಟ್ಟಿ ಅವರು ಈಗ ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ 3 ಮಿಲಿಯನ್ ಫಾಲೋವರ್ಸ್ಗಳನ್ನು ಪಡೆದಿದ್ದಾರೆ. ಅಂದರೆ, ಹೆಚ್ಚು ಕಡಿಮೆ 30 ಲಕ್ಷ ಅನುಯಾಯಿಗಳನ್ನು ಇನ್ಸ್ಟಾಗ್ರಾಂನಲ್ಲಿ ಗಿಟ್ಟಿಸಿಕೊಂಡಿದ್ದಾರೆ. ಈ ವಿಷಯವನ್ನು ಕೈಯಲ್ಲಿ ರೆಡ್ ರೋಸ್ ಹಿಡಿದು ಅಭಿಮಾನಿಗಳಿಗೆ ''3 ಮಿಲಿಯನ್ ಫ್ಯಾಮಿಲಿ, #LoveYouAll'', ಎಂದು ಹೇಳುತ್ತಾ ಧನ್ಯವಾದಗಳನ್ನು ತಿಳಿಸಿದ್ದಾರೆ ಕೃತಿ. ನಟಿಯ ಈ ಪೋಟೋ ಪೋಸ್ಟ್ಗೆ ಬರೋಬ್ಬರಿ 6.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಹರಿದುಬಂದಿವೆ. ಜತೆಗೆ, ನಟಿಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇನ್ನು, ಅತ್ಯಂತ ಕಡಿಮೆ ಸಮಯದಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ಗಳನ್ನು ಪಡೆದಿರುವ ನಟಿಯರ ಪಟ್ಟಿಯಲ್ಲಿ ಕೈತಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.