ಕೃತಿಗೆ ‘ಹ್ಯಾಟ್ರಿಕ್’ ಡಿಸೆಂಬರ್: ವರ್ಷಾಂತ್ಯದಲ್ಲಿ ನಟಿಯ ಮೂರು ತಮಿಳು ಸಿನಿಮಾಗಳು ರಿಲೀಸ್

krithi1
Published on

ಕರಾವಳಿ ಮೂಲದ ಕೃತಿ ಶೆಟ್ಟಿ ಹಿಂದಿ, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಭರವಸೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಿಂದಿಯ ‘ಸೂಪರ್ 30’, ತೆಲುಗಿನ ‘ಉಪ್ಪೇನಾ’, ‘ಶ್ಯಾಮ್ ಸಿಂಗ್ ರಾಯ್’, ‘ಕಸ್ಟಡಿ’ ಸೇರಿ 10 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ 2024ರ ಸೆಪ್ಟೆಂಬರ್‌ನಲ್ಲಿ ತೆರೆಕಂಡಿದ್ದ ಮಲಯಾಳಂನ ‘ಎಆರ್‌ಎಂ’ (ಅಜೇಯಂ, ರಾಂಧಮ್, ಮೋಷನಂ) ಬಳಿಕ ಕೃತಿ ನಟಿಸಿರುವ ಯಾವ ಚಿತ್ರಗಳು ತೆರೆಕಂಡಿಲ್ಲ. ಹಾಗಂತ ನಟಿ ತೆರೆಮೆರೆಗೆ ಸರಿದಿಲ್ಲ. ಸದ್ಯ ಅವರು ತಮಿಳಿನ ಮೂರು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಕಾಕತಾಳೀಯ ಏನೆಂದರೆ, ಈ ಮೂರು ಸಿನಿಮಾಗಳು ಇದೇ ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಜ್ಜಾಗಿವೆ. ಆ ಮೂಲಕ ಕೃತಿಗೆ ವರ್ಷಾಂತ್ಯ ಹ್ಯಾಟ್ರಿಕ್ ಸಂಭ್ರಮ ನೀಡುತ್ತಿದೆ. ಕೃತಿ ಶೆಟ್ಟಿ, ಕಾರ್ತಿಗೆ ಜೋಡಿಯಾಗಿರುವ ‘ವಾ ವಾಥಿಯಾರ್’ (ಡಿ.5) ಮತ್ತು ಪ್ರದೀಪ್ ರಂಗನಾಥನ್ ಜತೆ ನಟಿಸಿರುವ ‘ಲವ್ ಇನ್ಶುರೆನ್ಸ್ ಕಂಪನಿ (ಡಿ.18) ಬಿಡುಗಡೆಯಾಗಲಿದೆ ಎಂದು ೋಷಣೆಯಾಗಿದೆ. ಈ ಮಧ್ಯೆ, ನಟಿಯ ಮತ್ತೊಂದು ತಮಿಳು ಚಿತ್ರ ‘ಜೀನೀ’ ಕೂಡ ಅದೇ ತಿಂಗಳಲ್ಲಿ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಹೀಗೆ ಮೂರು ತಮಿಳು ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂದು ಖುಷಿಪಡಬೇಕೋ ಅಥವಾ ಒಂದೇ ತಿಂಗಳಲ್ಲಿ ರಿಲೀಸ್ ಆಗುತ್ತಿವೆಯಲ್ಲಾ ಎಂದು ಆತಂಕಪಡಬೇಕೋ ಎಂಬ ಗೊಂದಲ ನಟಿ ಕೃತಿ ಶೆಟ್ಟಿಯದು. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net