

ಬೆಂಗಳೂರು: ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಕೃಷ್ಣ ಮತ್ತು ಮಿಲನಾ, ಇದೀಗ ಹೊಸ ಮನೆ ಮಾಡಿಕೊಂಡಿದ್ದಾರೆ. ಸೋಮವಾರ ಈ ಮನೆಯ ಗೃಹಪ್ರವೇಶ ಸದ್ದಿಲ್ಲದೆ ಮುಗಿದಿದೆ. ಈ ಮನೆಯ ಗೃಹಪ್ರವೇಶದ ಕೆಲವು ಫೋಟೋಗಳನ್ನು ಮಿಲನಾ ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.
ಅಂದಹಾಗೆ, ಕೃಷ್ಣ ಮತ್ತು ಮಿಲನಾ ಇದುವರೆಗೂ ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 'ನಮ್ ದುನಿಯಾ ನಮ್ ಸ್ಟೈಲ್' ಎಂಬ ಚಿತ್ರದಲ್ಲಿ ನಟಿಸುವಾಗ ಇವರಿಬ್ಬರ ಪರಿಚಯವಾಯಿತು. 'ಚಾರ್ಲಿ' ಎಂಬ ಚಿತ್ರದಲ್ಲಿ ನಟಿಸುವಾಗ ಇಬ್ಬರ ನಡುವೆ ಪ್ರೇಮಾಂಕುರವಾಯಿತು. 'ಲವ್ ಮಾಕ್ಟೇಲ್' ನಂತರ ಮದುವೆಯೂ ಆಯಿತು. ಆ ನಂತರ ಇವರಿಬ್ಬರೂ 'ಲವ್ ಮಾಕ್ಟೇಲ್ 2' ಮತ್ತು 'ಲವ್ ಬರ್ಡ್ಸ್' ಚಿತ್ರಗಳಲ್ಲಿ ನಟಿಸುತ್ತಿದ್ದು, ಶಶಾಂಕ್ ನಿರ್ದೇಶನದ 'ಕೌಸಲ್ಯ ಸುಪ್ರಜಾ ರಾಮ' ಎಂಬ ಹೊಸ ಚಿತ್ರದಲ್ಲೂ ಜತೆಯಾಗಿ ನಟಿಸುತ್ತಿರುವ ಸುದ್ದಿ ಇದೆ.
ಇದನ್ನೂ ಓದಿ: ‘ಕಾಂತಾರ’ ಸಹ ನನ್ನ ಚಿತ್ರವೇ ಎಂದ ಯಶ್
ಕೃಷ್ಣ ಅಭಿನಯದ 'ದಿಲ್ ಪಸಂದ್' ಚಿತ್ರವು ಇದೇ ಶುಕ್ರವಾರ (11 ನವೆಂಬರ್ 2022) ಬಿಡುಗಡೆಯಾಗಲಿದೆ.