ಏಪ್ರಿಲ್​ 14ಕ್ಕೆ ಬಿಡುಗಡೆಯಾಗಲಿದೆ ಕೋಮಲ್​ ಹೊಸ ಚಿತ್ರ 'ಉಂಡೆನಾಮ'

Undenama
Published on

ಬೆಂಗಳೂರು: 'ಕೆಂಪೇಗೌಡ 2' ನಂತರ ಕೋಮಲ್​ ನಟಿಸಿರುವ ಹಾಸ್ಯ ಚಿತ್ರವೊಂದು ಈಗ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಚಿತ್ರಕ್ಕೆ 'ಉಂಡೆನಾಮ' ಎಂಬ ಹೆಸರಿಡಲಾಗಿದ್ದು, ಏ.14ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

'ಉಂಡೆನಾಮ' ಚಿತ್ರದ ಶೀರ್ಷಿಕೆಯನ್ನು ಹೇಳುವ ಮೂಲಕ ಜಗ್ಗೇಶ್​, 'ನೆನಪಿರಲಿ' ಪ್ರೇಮ್​, ಶರಣ್​, ಶ್ರುತಿ ಮುಂತಾದವರು ವಿಭಿನ್ನವಾಗಿ ಅನಾವರಣಗೊಳಿಸಿದ್ದಾರೆ. ಇವರೆಲ್ಲರೂ ಚಿತ್ರತಂಡಕ್ಕೆ ಶುಭ ಹಾರೈಸಿರುವ ವಿಡಿಯೋ, ಸೋಷಿಯಲ್​ ಮೀಡಿಆದಲ್ಲಿ ವೈರಲ್​ ಆಗಿದೆ.

ಕೋಮಲ್​ಗೆ ನಾಯಕಿಯಾಗಿ ಧನ್ಯಾ ಬಾಲಕೃಷ್ಣ ನಟಿಸಿದ್ದು, ಮಿಕ್ಕಂತೆ ಹರೀಶ್​ ರಾಜ್​, ತಬಲಾ ನಾಣಿ, ಅಪೂರ್ವ, ತನಿಷ ಕುಪ್ಪಂದ, ಬ್ಯಾಂಕ್​ ಜನಾರ್ಧನ್​ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ಎನ್​.ಕೆ. ಸ್ಟುಡಿಯೋಸ್​ನಡಿ ನಂದಕಿಶೋರ್​ ನಿರ್ಮಿಸಿದರೆ, ಸಂಭಾಷಣೆಕಾರ ಕೆ.ಎಲ್​. ರಾಜಶೇಖರ್​ ನಿರ್ದೇಶನ ಮಾಡಿದ್ದಾರೆ. ಶ್ರೀಧರ್ ಸಂಭ್ರಮ್​ ಸಂಗೀತ ಮತ್ತು ನವೀನ್​ ಕುಮಾರ್​ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಸುಮಾರು ಮೂರೂವರೆ ವರ್ಷಗಳ ನಂತರ ಕೋಮಲ್​ ಅಭಿನಯದ ಚಿತ್ರವೊಂದು ಬಿಡುಗಡೆಯಾಗುತ್ತಿದ್ದು, ಇದಲ್ಲದೆ 'ಕಾಲಾಯ ನಮಃ', 'ರೊಲೆಕ್ಸ್​' ಮತ್ತು 'ಯಲಾ ಕುನ್ನಿ' ಚಿತ್ರಗಳಲ್ಲೂ ಕೋಮಲ್​ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net