ಹೊಸ ಕಥೆಯೊಂದಿಗೆ ‘ಕಾಂಗರೂ’ ನಿರ್ದೇಶಕ: ಕಿಶೋರ್ ಮೇಗಳಮನೆ ನಿರ್ದೇಶನದ ಚಿತ್ರಕ್ಕೆ ಮಾಸ್ತಿ ಸಂಭಾಷಣೆ

kishore 1
Published on

ಬೆಂಗಳೂರು: ‘ಆಪರೇಷನ್ ನಕ್ಷತ್ರ’, ‘ಕಾಂಗರೂ’ ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದ ಕಿಶೋರ್ ಮೇಗಳಮನೆ ಸದ್ಯ ಹೊಸ ಚಿತ್ರದ ನಿರ್ದೇಶನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಮುಗಿದಿದ್ದು, ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಹೊಸ ಚಿತ್ರದಲ್ಲಿ ಬಹುತೇಕ ‘ಕಾಂಗರೂ’ ತಂತ್ರಜ್ಞರೇ ಕೆಲಸ ಮಾಡಲಿದ್ದಾರೆ. ಇನ್ನು ಮಾಸ್ತಿ ಉಪ್ಪಾರಹಳ್ಳಿ ಸಂಭಾಷಣೆ ಬರೆದಿದ್ದು, ರವಿ ಬಸ್ರೂರು ಸಂಗೀತ ನೀಡಲಿದ್ದಾರೆ. ಸದ್ಯದಲ್ಲೇ ಸೆಟ್ ಏರಲಿರುವ ಸಿನಿಮಾ ಬಗ್ಗೆ ಕಿಶೋರ್, ‘ಇದು ಮೂವರು ಗೆಳೆಯರ ನಡುವೆ ನಡೆಯುವ ಯೂಥ್‌ುಲ್ ಕಥೆ. ಜೀವನದಲ್ಲಿ ನೆನಪುಗಳು ಶಾಶ್ವತ. ಶಾಲೆ, ಕಾಲೇಜು, ಹಳ್ಳಿ, ಕೆಲಸ, ಗೆಳೆಯರು ಹೀಗೆ ಹಲವು ನೆನಪುಗಳು ಅಚ್ಚಳಿಯದೆ ಉಳಿದಿರುತ್ತವೆ. ಇದೇ ವಿಚಾರವನ್ನು ಇಟ್ಟುಕೊಂಡು ಕಥೆ ಸಿದ್ದಪಡಿಸಿದ್ದೇವೆ. ಎಲ್ಲರಿಗೂ ಕನೆಕ್ಟ್ ಆಗುವಂತಹ ಸ್ಟೋರಿ ಇದಾಗಲಿದೆ. ಕಥೆ ಹಳ್ಳಿಯಿಂದ ಆರಂಭವಾಗಿ ನಗರಕ್ಕೆ ಬಂದು ನಿಲ್ಲುತ್ತದೆ. ಶಿಕ್ಷಣದ ಪ್ರತಿ ಹಂತವನ್ನು ಇಲ್ಲಿ ನೋಡಬಹುದು. ಸದ್ಯಕ್ಕೆ 65 ದಿನಗಳ ಶೆಡ್ಯೂಲ್‌ನಲ್ಲಿ ಮೂಡಿಗೆರೆ ಸೇರಿ ಇತರ ಭಾಗಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ. ತಾರಾಗಣದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇನ್ನು 20 ದಿನಗಳಲ್ಲಿ ಟೈಟಲ್ ಹಾಗೂ ಕಲಾಬಳಗವನ್ನು ೋಷಣೆ ಮಾಡಲಿದ್ದೇವೆ. ಬಿಗ್ ಬಜೆಟ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ಸದ್ಯ ಕನ್ನಡದಲ್ಲಿ ಮಾತ್ರ ಚಿತ್ರೀಕರಣ ಮಾಡಲಿದ್ದೇವೆ. ಮುಂದೆ ಒಳ್ಳೆಯ ರೆಸ್ಪಾನ್ಸ್ ದೊರೆತರೆ ಪ್ಯಾನ್ ಇಂಡಿಯಾ ರೂಪದಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್ ಇದೆ’ ಎಂದು ಮಾಹಿತಿ ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net