ಇನ್ನು, ಬಿಡುಗಡೆಗೂ ಮುನ್ನ ಈ ಹಾಡನ್ನು ನೋಡಿದ ಕಿಚ್ಚ ತುಂಬಾನೆ ಖುಷಿಪಟ್ಟಿದ್ದಾರೆ. ಜೆತೆಗೆ, ‘ಜೇಮ್ಸ್' ತಂಡಕ್ಕೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ. ಈ ಬಗ್ಗೆ ಸ್ವತಃ ಕಿಚ್ಚ ಅವರು ಟ್ವೀಟ್ ಮಾಡಿದ್ದು, ‘ದೊಡ್ಡ ಪರದೆಯಲ್ಲಿ ಪುನೀತ್ ಅವರ ಇರುವಿಕೆಯನ್ನು ಸಂಭ್ರಮಿಸುವ ಕಾಲ ಇದು. ಮುತ್ತಿನಂಥ ವ್ಯಕ್ತಿತ್ವದ ಅವರಿಗೆ ಬೇರೆ ಯಾರೂ ಸರಿಸಾಟಿ ಇಲ್ಲ. ಜೇಮ್ಸ್ ಸಿನಿಮಾದ ಪ್ರತಿ ಕ್ಷಣವನ್ನು ಎಂಜಾಯ್ ಮಾಡಿ’ ಎಂದಿದ್ದಾರೆ. ಸದ್ಯ, 'ಸಲಾಂ ಸೋಲ್ಜರ್' ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.