

ನಟ ಸುದೀಪ್ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತ ಬಂದವರು. ಎನ್.ರಮೇಶ್ ನಿರ್ದೇಶನ, ನಿರ್ಮಾಣದ ‘ವಿಕ್ಕಿ’ ಚಿತ್ರದ ಟೀಸರ್ ಮತ್ತು ಆಡಿಯೋ ಬಿಡುಗಡೆ ಮಾಡಿ, ‘ರಮೇಶ್ ನಮ್ಮ ಕುಟುಂಬದ ಆಪ್ತರು. ಅವರ ‘ವಿಕ್ಕಿ’ ಚಿತ್ರ ಯಶಸ್ಸು ಕಾಣಲಿ’ ಎಂದು ಶುಭ ಕೋರಿದರು.
ಸಾಹಸಮಯ, ಕೌಟುಂಬಿಕ, ಪ್ರೇಮ ಕಥಾವಸ್ತು ಹೊಂದಿರುವ ಚಿತ್ರ, ಈಗಾಗಲೇ ಶೂಟಿಂಗ್ ಮುಗಿಸಿದೆ. ಫೆಬ್ರವರಿಯಲ್ಲಿ ಬಿಡುಗಡೆ ಆಗಲಿದೆ. ಆರ್ಯನ್, ರಿದಿ ರಾವ್, ಸುಂದರರಾಜ್, ಕೀರ್ತಿರಾಜ್, ಮನಮೋಹನ್ ರಾಯ್, ರೇಣು, ಬ್ಯಾಂಕ್ ಜನಾರ್ದನ್, ರವಿ ಕಲ್ಯಾಣ್, ಟೆನ್ನಿಸ್ ಕೃಷ್ಣ ಪ್ರಮುಖ ತಾರಾಬಳಗದಲ್ಲಿದ್ದಾರೆ.